Advertisement

ಗ್ರಾಮ ವಾಸ್ತವ್ಯದಲ್ಲಿ ದೂರುಗಳ ಸುರಿಮಳೆ

03:22 PM Feb 21, 2021 | Team Udayavani |

ಗೌರಿಬಿದನೂರು: ತಾಲೂಕಿನ ಹಳೇಹಳ್ಳಿಯಲ್ಲಿ ನಡೆದ “ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದದೂರುಗಳ ಸುರಿಮಳೆ ಕಂಡು ಬಂದಿದ್ದು ಸಮಸ್ಯೆ ಗಳನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ತಹಶೀಲ್ದಾರ್‌ ಎಚ್‌.ಶ್ರೀನಿವಾಸ್‌ ಭರವಸೆ ನೀಡಿದರು.

Advertisement

ಮಂಚೇನಹಳ್ಳಿ ವ್ಯಾಪ್ತಿಯ ಹಳೇಹಳ್ಳಿ ಗ್ರಾಪಂಹಳೇಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಉದ್ಘಾಟಿಸಿ ಮಾತನಾಡಿ, ಸುಮಾರು 150ಕ್ಕೂ ಹೆಚ್ಚು ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ದೂರು ಅರ್ಜಿಗಳುಬಂದಿವೆ. ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯ ರಿಗೆ ಸಿಗುವ ಸೌಲಭ್ಯಗಳು ಫ‌ಲಾನುಭವಿಗಳಿಗೆ ಬೇ ಕಾಗಿರುವ ಮೂಲ ದಾಖಲಾತಿ, ವೇತನ, ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ ಹೀಗೆ ವೇತನಗಳು ದೊರೆಯದೇ ಇದ್ದಲ್ಲಿ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದರು. ಅಲ್ಲದೇ, ಮಾಸಾಶನ ದೊರೆಯದೆ ಇದ್ದಲ್ಲಿ ಪ್ರತಿಯೊಬ್ಬರು ಸಂಬಂಧಪಟ್ಟಅಧಿಕಾರಿಗಳನ್ನು ಮುಖಾಮುಖೀಯಾಗಿ ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ಪಹಣಿ, ವಾರಸ್ಥರು ಸೇರಿದಂತೆ ಪ್ರತಿ ಯೊಂದು ಸಮಸ್ಯೆ, ಪಿಂಚಣಿ, ಪಹಣಿ ತಿದ್ದುಪಡಿ ಬಗರ್‌ ಹುಕುಂ, ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಸಂಬಂಧಿಸಿದಂತೆ ಸಮಸ್ಯೆಗಳ ಪರಿಹಾರಮುಖಾಮುಖೀಯಾಗಿ ಚರ್ಚಿಸಬಹುದು. ಶಾಲೆಅಂಗನವಾಡಿ, ಆರೋಗ್ಯ, ಬೆಸ್ಕಾಂ, ಅರಣ್ಯ ಇಲಾ ಖೆಗೆ ಸಂಬಂಧಪಟ್ಟಂತೆ ಗ್ರಾಪಂ, ಕೃಷಿ, ಯಾವುದೇಸಮಸ್ಯೆ ಇರಲಿ ಈ ಕಾರ್ಯಕ್ರಮದಲ್ಲಿ ಪರಿಹರಿಸಿ ಕೊಳ್ಳಿ ಎಂದರು. ಅಲ್ಲದೇ ಇದೇ ವೇಳೆ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕೃಷಿ ತೋಟಗಾರಿಕೆ ಅರಣ್ಯ ಇಲಾಖೆ ಬೆಸ್ಕಾಂಆರೋಗ್ಯ ಇಲಾಖೆ ಸೇರಿದಂತೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳುಸೂಕ್ತ ರೀತಿಯಲ್ಲಿ ಸಮಸ್ಯೆ ಆಲಿಸಬೇಕು, ಸೌಲಭ್ಯಪಡೆಯುವವರು ಅಗತ್ಯ ದಾಖಲಾತಿಸಲ್ಲಿಸಬೇಕೆಂದು ತಿಳಿಸಿದರು.

ತಾಪಂ ಇಒ ಮುನಿರಾಜು ಮಾತನಾಡಿ, ನರೇಗಾ ಸೇರಿದಂತೆ ಶಾಸಕರ ಯೋಜನೆಗಳು ಹಾಗೂ ಸ್ವಚ್ಛ ಭಾರತ್‌ನಡಿ ಸಿಗುವ ಸೌಲಭ್ಯ, ಅಂತರ್ಜಲ, ಮನೆ ಮನೆಗೂ ಕುಡಿಯುವ ನೀರಿನ ಸೌಲಭ್ಯ, ಚರಂಡಿ, ರಸ್ತೆಗಳು ಹೀಗೆ ಪ್ರತಿಯೊಂದು ಉದ್ಯೋಗ ಖಾತ್ರಿ ಯೋಜನೆಯಡಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

Advertisement

ಸ್ಥಳೀಯ ಕಂದಾಯ ಇಲಾಖಾ ಉಪ ತಹಶೀಲ್ದಾರ್‌ ಮಂಜುನಾಥ್‌, ರಾಜಸ್ವ ನಿರೀಕ್ಷಕರಾದ ವೆಂಕಟೇಶ್‌, ಗ್ರಾಮ ಲೆಕ್ಕಿಗರಾದ ಬಾಬಾಜಾನ್‌ ಜಗದೀಶ್‌, ಹರೀಶ್‌ ಕುಮಾರ್‌, ಜಾನ್ಸನ್‌ ಬಾಬು ,ರೂಪಿಣಿ, ಕೆ.ಶೋಭಾ, ನಾಡ ಕಚೇರಿ ಸಹಾಯಕರುಹಾಗೂ ಸಿಬ್ಬಂದಿ ಸೇರಿದಂತೆ ಹಾಗೂ ಸಿಬ್ಬಂದಿ,ಎಲ್ಲಾ ಇಲಾಖಾಧಿಕಾರಿಗಳು, ಬಿಜೆಪಿ ಜಿಲ್ಲಾ ಉಪಾ ಧ್ಯಕ್ಷ ಎಂ.ನಾರಾಯಣಸ್ವಾಮಿ, ರವಿಕುಮಾರ್‌ಶ್ರೀಪಾಲ್‌, ಪ್ರಭು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next