Advertisement
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ನೇತೃತ್ವದ ಬಿಜೆಪಿ ಸಂಸದರ ನಿಯೋಗ ರಾಹುಲ್ ಗಾಂಧಿ ವಿರುದ್ಧ ಹಲ್ಲೆ ಮತ್ತು ಪ್ರಚೋದನೆ ಆರೋಪದಡಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ಸಂಸದರ ನಿಯೋಗ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದೆ.
Related Articles
Advertisement
ಲೋಕಸಭೆಯಲ್ಲಿ ವಿಪಕ್ಷ ನಾಯಕನ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಸಭಾ ಸಂಸದ ಕೊನ್ಯಾಕ್ ಅವರು ಸಭಾಪತಿಗೆ ಪತ್ರ ಬರೆದಿದ್ದಾರೆ.
ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸಿದ ದೌರ್ಜನ್ಯದ ವಿರುದ್ಧ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ ವೇಳೆ, ರಾಹುಲ್ ಗಾಂಧಿಯವರು ತೀವ್ರವಾಗಿ ನೋವುಂಟುಮಾಡಿದರು. ನನ್ನ ಘನತೆ ಮತ್ತು ಸ್ವಾಭಿಮಾನವನ್ನು ಘಾಸಿಗೊಳಿಸಿದ್ದಾರೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
”ರಾಹುಲ್ ಗಾಂಧಿ ತುಂಬಾ ಹತ್ತಿರಕ್ಕೆ ಬಂದರು.ನಾನು ಭಾರವಾದ ಹೃದಯದಿಂದ ಪಕ್ಕಕ್ಕೆ ಸರಿದೆ. ನನ್ನ ಪ್ರಜಾಪ್ರಭುತ್ವ ಹಕ್ಕುಗಳ ಮೂಲಕ ಖಂಡಿಸಿದೆ ಆದರೆ ಯಾವುದೇ ಸಂಸದರು ಈ ರೀತಿ ವರ್ತಿಸಬಾರದು ಎಂದು ಭಾವಿಸಿದೆ.ನಾನು ನಾಗಾಲ್ಯಾಂಡ್ನ ಎಸ್ಟಿ ಸಮುದಾಯಕ್ಕೆ ಸೇರಿದ ಮಹಿಳಾ ಸದಸ್ಯೆಯಾಗಿ ರಕ್ಷಣೆಯನ್ನು ಕೋರುತ್ತೇನೆ” ಎಂದು ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ಸಂಸದರು ಸಂಸತ್ತಿನ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಆರೋಪಿಸಿದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಬಿಜೆಪಿ ಸಂಸದರು ತಮ್ಮನ್ನು ದೈಹಿಕವಾಗಿ ತಳ್ಳಿದರು, ಇದರಿಂದಾಗಿ ಅವರು ಸಮತೋಲನ ಕಳೆದುಕೊಂಡು ಮತ್ತು ಮೊಣಕಾಲುಗಳಿಗೆ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ. “ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಜೀ ಅವರನ್ನು ಅವಮಾನಿಸಿದ ನಂತರ, ನರೇಂದ್ರ ಮೋದಿ ಸಂಸತ್ತಿನ ಘನತೆಗೆ ಅವಮಾನ ಮಾಡಿದ್ದಾರೆ, ಬಿಜೆಪಿ ಸಂಸದರು ದಪ್ಪ ಕೋಲುಗಳಿಂದ ಕೂಡಿದ ಭಿತ್ತಿಪತ್ರಗಳನ್ನು ಹಿಡಿದುಕೊಂಡು, ಇಂಡಿಯಾ ಮೈತ್ರಿ ಕೂಟದ ಸಂಸದರ ಶಾಂತಿಯುತ ಪ್ರತಿಭಟನೆಯನ್ನು ತಡೆದಿದ್ದಾರೆ”ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.