Advertisement
ಆರೋಪಿಗಳಾದ ಹಳ್ಳಿಮನೆ ರೆಸಾರ್ಟ್ ಮಾಲಕ ಪ್ರವೀಣ್ ಹಾಗೂ ಜತೆಗಾರರಾದ ಮನೋಜ್ ಕುಂಜರ್ಪ, ರಂಜನ್ ಕಡಂಬು, ಪ್ರಜ್ವಲ್, ಗಣೇಶ್ ಶೆಟ್ಟಿ ಕುಂಟಿನಿ, ಶರತ್ ಕುಂಜರ್ಪ ಮತ್ತು ಇತರರು ನಿಡ್ಲೆ ಗ್ರಾಮದ ಕೊಡಂಗೆ ಮನೆ ನಿವಾಸಿ ಗಿರೀಶ್ ಹಾಗೂ ಸ್ನೇಹಿತರಿಗೆ ಗಂಭೀರ ಹಲ್ಲೆ ನಡೆಸಿರುವ ವಿರುದ್ಧ ದೂರಲಾಗಿದೆ.
ಗಿರೀಶ್ ತನ್ನ ಸ್ನೇಹಿತ ಸಂದೇಶ್ ಮತ್ತು ಬಾಲಕೃಷ್ಣ ಶೆಟ್ಟಿ ಅವರೊಂದಿಗೆ ಸೋಮವಾರ ಉಜಿರೆ ಹಳ್ಳಿಮನೆ ರೆಸಾರ್ಟ್‌ಗೆ ಹೋಗಿ ಆಹಾರ ಸೇವಿಸಿ ಬಿಲ್ಲು ನೀಡಿ ಹೊರಬರುತ್ತಿದ್ದರು. ಈ ವೇಳೆ ರೆಸಾರ್ಟ್ ಮಾಲಕ ಪ್ರವೀಣ್ ಹಾಗೂ ಜತೆಗಾರರು ಅನಾವಶ್ಯಕ ವಿಷಯ ತೆಗೆದು ಮಾತಿಗೆ ಮಾತು ಬೆಳೆಸಿ ಗಿರೀಶ್, ಅವರ ಸ್ನೇಹಿತರಾದ ಸಂದೇಶ್, ಬಾಲಕೃಷ್ಣ ಶೆಟ್ಟಿ ಅವರನ್ನು ಅಡ್ಡಗಟ್ಟಿ ಗಂಭೀರ ಹಲ್ಲೆ ನಡೆಸಿದ್ದಾರೆ. ಗಿರೀಶ್ ಪ್ಯಾಂಟ್ ಜೇಬಿನಲ್ಲಿದ್ದ 1,98,000 ರೂ. ನಗದು ಸಹಿತ ಸುಮಾರು 4 ಪವನ್ ಸರ, ಜತೆಯಲ್ಲಿದ್ದ ಸಂದೇಶ್ ಅವರ ಚಿನ್ನದ ಸರ ಎಗರಿಸಿ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ನಗದು ಸಹಿತ ಒಟ್ಟು ಒಟ್ಟು 1,50,000 ರೂ. ಮೌಲ್ಯದ ಚಿನ್ನಾಭರಣ ಎಗರಿಸಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
Related Articles
ಹಳ್ಳಿಮನೆ ರೆಸಾರ್ಟ್‌ನಲ್ಲಿ ಆರೋಪಿಗಳಾದ ಗಿರೀಶ್, ಭರತ್, ಬಾಲಕೃಷ್ಣ, ಸಂದೇಶ್ ಅವರು ಮದ್ಯಪಾನ ಹಾಗೂ ಆಹಾರ ಕೇಳಿಬಂದಿದ್ದು, ರೆಸಾರ್ಟ್ ನಲ್ಲಿ ಮದ್ಯ ಸೇವಿಸಲು ನಿರಾಕರಿಸಿದ್ದಕ್ಕೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ರೆಸಾರ್ಟ್ ಪಾಲುದಾರೆ ಉಜಿರೆ ಅಳಿಕೆ ನಿವಾಸಿ ಸವಿತಾ ಬ್ಯಾಪ್ಟಿಸ್ಟ್ (34) ಪ್ರತಿದೂರು ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳ ವಿರುದ್ಧ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Advertisement