ಸುದೀಪ ನಿರ್ಮಾಣದ “ವಾರಸಾªರ’ ಧಾರಾವಾಹಿಯ ಚಿತ್ರೀಕರಣವನ್ನು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಅವರ ಮನೆ ಹಾಗೂ ಕಾμ ತೋಟದಲ್ಲಿ ಮಾಡಲಾಗಿತ್ತು. ಚಿತ್ರೀಕರಣ ಮುಗಿದ ನಂತರ ಮನೆ ಬಾಡಿಗೆ ನೀಡಿಲ್ಲ ಮತ್ತು ಚಿತ್ರೀಕರಣದ ವೇಳೆ ತೋಟವನ್ನು ಹಾಳು ಮಾಡಲಾಗಿದೆ ಎಂದು ದೀಪಕ್ ಮಯೂರ್ ನಿರ್ಮಾಪಕ ಕಿಚ್ಚ ಸುದೀಪ ಹಾಗೂ ಸಹ ನಿರ್ಮಾಪಕ ಮಹೇಶ್, ನಿರ್ದೇಶಕ ಗಡ್ಡ ವಿಜಿ ವಿರುದ್ಧ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕಚೇರಿಗೆ
ದೂರು ಸಲ್ಲಿಸಿದ್ದಾರೆ. ಇದಲ್ಲದೆ ಮೂವರಿಗೂ ವಕೀಲರ ಮೂಲಕ ನೋಟಿಸ್ ಜಾರಿಯಾಗಿದೆ. ಕಾμ ತೋಟದಲ್ಲಿ “ವಾರಸಾªರ’ ಧಾರಾವಾಹಿಯ ಚಿತ್ರೀಕರಣ 40 ದಿನ ನಡೆದಿತ್ತು. ಮನೆ ಬಾಡಿಗೆ ದಿನಕ್ಕೆ 6 ಸಾವಿರದಂತೆ ನೀಡುವುದಾಗಿ ಹೇಳಲಾಗಿತ್ತು.
Advertisement
ಆದರೆ ಒಟ್ಟು ಬಾಡಿಗೆ ಹಣ 1.50 ಲಕ್ಷ ರೂ. ನೀಡಿಲ್ಲ. ಅಲ್ಲದೆ ಚಿತ್ರೀಕರಣದ ವೇಳೆ ತೋಟದಲ್ಲಿನ ಬೆಳೆ ನಾಶವಾಗಿದೆ. ಇದರ ನಷ್ಟವನ್ನು ಭರಿಸಿಕೊಡಬೇಕು ಎಂದು ದೂರಿನಲ್ಲಿ ಹೇಳಲಾಗಿದೆ. ಧಾರಾವಾಹಿಯ ನಿರ್ಮಾಪಕ ಮಹೇಶ್ ಹಾಗೂ ಗಡ್ಡ ವಿಜಿ ಅವರನ್ನು ಕರೆಸಿ ಹೇಳಿಕೆ ಪಡೆದು ಲೋಪವಾಗಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.