ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-1) ಕಾರ್ಯಕ್ರಮ ನಿರೂಪಣೆ ಎರಡು ವಾರದ ಬಳಿಕ ಕಿಚ್ಚ ಬಂದಿದ್ದಾರೆ. ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೇ ಸುದೀಪ್ ನೋವು ನುಂಗಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತಾಯಿಯನ್ನು ನೆನೆದು ಬಿಗ್ ಬಾಸ್ ವೇದಿಕೆಯಲ್ಲೇ ಕಿಚ್ಚ ಕಣ್ಣೀರಿಟ್ಟಿದ್ದಾರೆ. ನನ್ನ ತಾಯಿ ಬಿಗ್ ಬಾಸ್ ಕಾರ್ಯಕ್ರಮವನ್ನು ತುಂಬಾ ಇಷ್ಟಪಡುತ್ತಿದ್ದರು. ನನಗೆ ತುಂಬಾ ಕೆಲಸವಿದೆ ಎಂದು ಕಿಚ್ಚ ಹೇಳಿ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ.
ಬಿಗ್ ಬಾಸ್ ನಡೆಸೋಕೆ ಸುಸ್ತು ಆಗ್ತಾ ಇದೆ ಸಾಕಪ್ಪ ಈ ವರ್ಷ ಬಿಟ್ಟು ಬಿಡೋಣ ಅಂದ್ರೆ ಅವರು ಬರ್ತಾರೆ, ಇವರು ಬರ್ತಾರೆ ಅಂಥ ಎರಡು ಮೂರು ಹೆಸರು ಓಡಾಡುತ್ತದೆ. ನಾನು ಇಲ್ಲಿ ನಿಂತುಕೊಂಡು ಯಾರ ಹೆಸರು ಹೇಳೋದಾ, ಅವರು, ಇವರು ಬರ್ತಾರೆ ಅಂಥ ನೋಡುತ್ತಾ ಕೂರೋದಾ. ವೇದಿಕೆ ಮೇಲೆ ನಾನು ನಿಂತರೆ ಈ ವೇದಿಕೆಗೆ ನನ್ನಿಂದ ಎಷ್ಟು ತೂಕ ಅಂಥ ಕಾನ್ಫಿಡೆಸ್ ಯಿಂದ ಇರೋದಾ ಎಂದು ಕಿಚ್ಚ ಮೋಕ್ಷಿತಾ, ಮಂಜು, ಹಾಗೂ ತಿವಿಕ್ರಮ್ ಅವರಿಗೆ ಬುದ್ಧಿ ಮಾತು ಹೇಳುವ ಸಂದರ್ಭದಲ್ಲಿ ಹೇಳಿದ್ದಾರೆ.
ಕಲರ್ಸ್ ವಾಹಿನಿ ಸುದೀಪ್ ಅವರ ತಾಯಿಗೆ ವೇದಿಕೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ. ಇದನ್ನು ಮುಂದೆ ನಿಂತು ನೋಡಿದ ಕಿಚ್ಚ ಭಾವುಕರಾಗಿದ್ದಾರೆ.
ನನ್ನ ತಾಯಿಯ ಅತೀ ಪ್ರೀತಿಯ ಶೋ ಇದು. ಇದನ್ನು ನಡೆಸಿ ಕೊಡೋದಕ್ಕೆ ಖುಷಿ ಆಗುತ್ತದೆ. ಪ್ರತಿಸಲ ಎಪಿಸೋಡ್ ಮುಗಿಸಿ ಮನೆಗೆ ಹೋದಾಗ, ತುಂಬಾ ಚೆನ್ನಾಗಿ ಕಾಸ್ಟ್ಯೂಮ್ ಹಾಕಿಕೊಂಡಾಗ ಥೂ ನಾಯಿ ಚೆನ್ನಾಗಿ ಕಾಣ್ತಾ ಇದ್ದೀಯಾ, ದೃಷ್ಟಿ ತಕ್ಕೋ ಅಂಥ ನನ್ನ ತಾಯಿ ನನಗೆ ಹೇಳ್ತಾ ಇದ್ದರು. ನೋವು ಆಗುತ್ತದೆ ಆದ್ರೆ ಅದನ್ನೇ ಸ್ಪೂರ್ತಿ ಆಗಿ ಇಟ್ಟುಕೊಂಡು ನಿಲ್ಲೋದಕ್ಕೆ ಶಕ್ತಿ ಆಗುತ್ತದೆ. ನನ್ನ ಫೋಟೋವನ್ನು ವಿಟಿಯಲ್ಲಿ ನೋಡಿ ನೋಡಿ ಅಭ್ಯಾಸ. ಇವತ್ತು ದೊಡ್ಡ ಪರೆದಯಲ್ಲಿ ನೋಡೋದಕ್ಕೆ ಕಷ್ಟ ಆಯಿತು. ನೀವೆಲ್ಲರೂ ಸೇರಿ ನನಗೆಕೊಟ್ಟ ಪ್ರೀತಿ, ಶಕ್ತಿ ಮನಸ್ಸಿನಲ್ಲಿ ಖಂಡಿತ ಇಟ್ಟುಕೊಳ್ಳುತ್ತೀನಿ. ನನಗೆ ಮೆಸೇಜ್ ಮಾಡಿ ಟ್ವೀಟ್ ಮಾಡಿದ್ದೀರಿ. ಸಾಮಾನ್ಯವಾಗಿ ಎಷ್ಟೋ ಸಲ ಫ್ಯಾನ್ಸ್ ಗಳ ಮಧ್ಯ ವಾರ್ ಗಳು ನಡೆಯುತ್ತದೆ. ಎಲ್ಲ ಫ್ಯಾನ್ಸ್ ಕೂಡ ಬೇರೆಯವರ ಫ್ಯಾನ್ಸ್ ಕೂಡ ತುಂಬಾ ಪ್ರೀತಿಯಿಂದ ಶ್ರದ್ದಾಂಜಲಿ ನನಗೆ ತಲುಪುವಂತೆ ಮಾಡಿದ್ದೀರಿ ಎಲ್ಲರಿಗೂ ಥ್ಯಾಂಕ್ಸ್ ಅಂಥ ಎಂದು ಕಿಚ್ಚ ಹೇಳಿದ್ದಾರೆ.
ಇದು ನನ್ನ ಕೊನೆಯ ಸೀಸನ್ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆದರೆ ತಮ್ಮ ತಾಯಿಗೋಸ್ಕರ ಸುದೀಪ್ ಬಿಗ್ ಬಾಸ್ ನಡೆಸಿಕೊಡುತ್ತಾರೆ ಅಂಥ ಅನೇಕರು ಹೇಳುತ್ತಿದ್ದಾರೆ. ಅವರೇ ಬಿಗ್ ಬಾಸ್ ನಡೆಸಿಕೊಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಶುರುವಾಗಿದೆ.