Advertisement
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈ ಅವರು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನುಣುಚಿಕೊಳ್ಳುವಯತ್ನ ಮಾಡುತ್ತಿದ್ದಾರೆ. 28 ಎಕರೆ ಸರಕಾರಿ ಜಾಗದಲ್ಲಿ 10 ಎಕರೆ ಸರಕಾರಿ ಜಾಗ ಕಬಳಿಸಿ ರಬ್ಬರ್ ಬೆಳೆದಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ವೆ ನಡೆಸಿದರೆ ಸತ್ಯ ಬಯಲಾಗುತ್ತದೆ ಎಂದರು. ಸರಕಾರ ಅಕ್ರಮ ಸಕ್ರಮ ಪದ್ಧತಿ ಜಾರಿಗೆ ತಂದದ್ದು ಸಣ್ಣ ರೈತರಿಗೋಸ್ಕರ. ಆದರೆ, ರಮಾನಾಥ ರೈ ಅವರ ಪತ್ನಿ ಹೆಸರಲ್ಲಿ 6 ಸಾವಿರ ರೂ.ಆದಾಯ ದಾಖಲು ಮಾಡಿ ಮಾಣಿ ಗ್ರಾಮದಲ್ಲಿ 4 ಎಕರೆ ಜಮೀನನ್ನು ಅಕ್ರಮ ಸಕ್ರಮ ಮೂಲಕ ಪಡೆದಿದ್ದಾರೆ. ಬಂಟ್ವಾಳ ಬಳಿಯ ರಾಜರಾಜೇಶ್ವರಿ ಭಜನಾ ಮಂದಿರದ ಪಕ್ಕದಲ್ಲಿನ ರೈ ಅವರ ಸರಕಾರಿ ಜಮೀನಿನಲ್ಲಿ ಪಂಪ್ ಸೆಟ್ ಇದ್ದು, ಇದು ಅಕ್ರಮವಾಗಿದೆ ಎಂದು ಆರೋಪಿಸಿದರು. ಅಲ್ಲದೆ, ತಮಗೆ ಈಗಾಗಲೇ 5 ಬೆದರಿಕೆ ಪತ್ರಗಳು ಬಂದಿವೆ ಎಂದರು.
ಮಂಗಳೂರು: ಭೂ ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ಹರಿಕೃಷ್ಣ ಬಂಟ್ವಾಳ ಅವರು ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಅಲ್ಲದೆ, ಹರಿಕೃಷ್ಣ ಬಂಟ್ವಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಚಿವರು “ಉದಯವಾಣಿ’ಗೆ ತಿಳಿಸಿದ್ದಾರೆ.