Advertisement

ಅಶೋಕ್‌ ವಿರುದ್ಧ ಬಿಜೆಪಿ ಹೈ ಕಮಾಂಡ್‌ಗೆ ದೂರು?

11:00 AM Nov 04, 2017 | Team Udayavani |

ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಕರ್ತರು ಬಾರದ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ನಾಯಕರು ದೂರು ನೀಡಿದ್ದಾರೆ ಎನ್ನಲಾಗಿದೆ.

Advertisement

ಬೆಂಗಳೂರು ಮಹಾನಗರ ಬಿಜೆಪಿ ಉಸ್ತುವಾರಿಯೂ ಆಗಿರುವ ಆರ್‌.ಅಶೋಕ್‌ ಅವರಿಗೆ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ನಗರದ 28 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರನ್ನು ಸೇರಿಸುವ ಜವಾಬ್ದಾರಿ ಜತೆಗೆ ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ಉಸ್ತುವಾರಿ ವಹಿಸಲಾಗಿತ್ತು. ಆದರೆ ಕಾರ್ಯಕರ್ತರನ್ನು ಸೇರಿಸಲು ಅಶೋಕ್‌ ವಿಫ‌ಲರಾಗಿದ್ದಾರೆ ಎಂದು ರಾಷ್ಟ್ರಾಧ್ಯಕ್ಷ ಅಮಿತ್‌ ಶಾಗೆ ದೂರಿತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ 12 ಮಂದಿ ಬಿಜೆಪಿಯ ಶಾಸಕರು ಹಾಗೂ 3 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಸಂಸದರೇ ಇದ್ದಾರೆ. ಒಂದೊಂದು ಕ್ಷೇತ್ರದಿಂದ 10 ಸಾವಿರ ಕಾರ್ಯಕರ್ತರು ಬಂದಿದ್ದರೂ 1 ಲಕ್ಷ ದಾಟುತಿತ್ತು.

ಆದರೆ ಕಾರ್ಯಕ್ರಮ ವೇಳೆ ಅಮಿತ್‌ ಶಾ  ಖಾಲಿ ಕುರ್ಚಿ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ನಾಯಕರನ್ನು ಕೇಳಿದಾಗ, ಕಾರ್ಯಕ್ರಮದ ಉಸ್ತುವಾರಿಯನ್ನು ಆರ್‌.ಅಶೋಕ್‌ಗೆ ನೀಡಲಾಗಿದ್ದು, ಅವರ ಆಸಕ್ತಿ ವಹಿಸಿ ಕೆಲಸ ಮಾಡಿಲ್ಲ ಎಂದು ರಾಜ್ಯ ನಾಯಕರೊಬ್ಬರು ಅಮಿತ್‌ಶಾರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next