Advertisement

ಸ್ಫರ್ಧಾತ್ಮಕ ಪರೀಕ್ಷೆಗಳೇ ಉದ್ಯೋಗಕ್ಕೆ ರಹದಾರಿ

03:22 PM Sep 18, 2022 | Shwetha M |

ವಿಜಯಪುರ: ವಿದ್ಯಾರ್ಥಿಗಳು ನಿರಂತರ ಓದಿನ ಪ್ರಯತ್ನದಿಂದಲೇ ಯಶಸ್ಸು ಹೊಂದಲು ಸಾಧ್ಯ. ಸ್ಪರ್ಧಾತ್ಮಕ ಪದ್ಧತಿಯಲ್ಲಿ ನಡೆಯುವ ಅರ್ಹತಾ ಪರೀಕ್ಷೆಗಳು ಉದ್ಯೋಗದ ರಹದಾರಿಗಿವೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಬಿ.ಎಸ್‌.ನಾವಿ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್‌ ಅಕಾಡೆಮಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಿಟಿಇಟಿ-ಕೆ-ಟಿಇಟಿ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಮತ್ತು ವೃತ್ತಿಗೆ ಸಿದ್ಧತೆ ಎರಡು ಕ್ರಮಗಳು ಒಟ್ಟಿಗೆ ನಡೆಸಬೇಕು ಹಾಗೂ ಅದಕ್ಕಾಗಿ ತರಬೇತಿ ಅಗತ್ಯ ಎಂದರು.

ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ವಿಷ್ಣು ಶಿಂಧೆ ಮಾತನಾಡಿ, ಕೌಶಲ್ಯ, ತರಬೇತಿ, ತಜ್ಞತೆ ಇವುಗಳಿಂದ ಮಾತ್ರ ಅರ್ಹತೆ ಪಡೆಯಲು ಸಾದ್ಯ. ಅದಕ್ಕಾಗಿ ನಿರಂತರ ಪ್ರಯತ್ನ ಮುಖ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ| ಉದಕುಮಾರ ಕುಲಕರ್ಣಿ, ವಿಧ್ಯಾರ್ಥಿಗಳು ಶೃದ್ಧೆಯಿಂದ ತರಬೇತಿಯಲ್ಲಿ ಭಾಗವಹಿಸಿ ಬದ್ಧತೆಯಿಂದ ಕಲಿಯಬೇಕು. ಇಂಥ ಕಾರ್ಯಕ್ರಮಗಳ ಪ್ರಯೋಜನ ಪಡೆದು ನೀವೆಲ್ಲ ಉದ್ಯೋಗ ಪಡೆದಾಗಲೇ ಕಾರ್ಯಕ್ರಮ ಆಯೋಜನೆಗೆ ಅರ್ಥ ಬರಲಿದೆ ಎಂದರು.

ಕಾರ್ಯಕ್ರಮದ ಸಂಯೋಜಕ ಡಾ| ಪ್ರಕಾಶ ಸಣ್ಣಕ್ಕನವರ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಆವಜಿ, ಮಂಜುನಾಥ ಗದಗ, ಡಾ| ಪ್ರಕಾಶ ಬಡಿಗೇರ, ಲಿಂಗರಾಜ ಯತ್ನಳ್ಳಿ ಇದ್ದರು. ಪ್ರಶಿಕ್ಷಣಾರ್ಥಿಗಳು ಮಹಿಳಾ ಗೀತೆ ಹಾಡಿದರು. ತರನುಮ್‌ ಸಭಾ ಪರಿಚಯಿಸಿದರು. ನೇತ್ರಾ ತೊರವಿ ನಿರೂಪಿಸಿದರು. ರುಕ್ಸಾನಬೀ ಬಡೇಗಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next