Advertisement
ಸಮಾಜ ಕಲ್ಯಾಣ ಇಲಾಖೆಯಡಿ 8, ಪರಿಶಿಷ್ಟ ವರ್ಗಗಳ ಇಲಾಖೆಯಡಿ 5, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 24 ಹಾಗೂ ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆಯಡಿ 2 ಸೇರಿದಂತೆ ಒಟ್ಟು 39 ಮೆಟ್ರಿಕ್ ಅನಂತರದ ಹಾಸ್ಟೆಲ್‌ಗಳು ಜಿಲ್ಲೆಯ ಲ್ಲಿವೆ. 3,521 ವಿದ್ಯಾರ್ಥಿಗಳು ಈವರ್ಷ ಪ್ರವೇಶ ಪಡೆದಿದ್ದಾರೆ. ಒಟ್ಟು ಸುಮಾರು 10 ಸಾವಿರ ವಿದ್ಯಾರ್ಥಿ ಗಳಿದ್ದು ವಿವಿಧ ಪದವಿ/ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ತರಬೇತಿ ನೀಡಲು ಪ್ರೈಮ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಸಂಸ್ಥೆಯ ನುರಿತ ತರಬೇತುದಾರರು ತರಬೇತಿ ನೀಡುವರು. ಸದ್ಯ ಆಸಕ್ತ ವಿದ್ಯಾರ್ಥಿಗಳಿಂದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ತರಗತಿಗೆ ಬೇಕಾದ ಪರಿಕರಗಳನ್ನು ಈಗಾಗಲೇ ಹಾಸ್ಟೆಲ್‌ಗಳಿಗೆ ನೀಡಲಾಗಿದೆ. ಆಫ್ಲೈನ್ ಟೆಸ್ಟ್
ಹಾಸ್ಟೆಲ್‌ನಲ್ಲಿರುವ ಆಸಕ್ತ ವಿದ್ಯಾರ್ಥಿಗಳೆಲ್ಲರೂ ತರಬೇತಿಗೆ ಸೇರಿಕೊಳ್ಳ ಬಹುದು. ತರಬೇತಿಗೆ ಕನಿಷ್ಠ ಶುಲ್ಕ ವಿಧಿಸುವ ಚಿಂತನೆ ಇದೆ. ಈಗಾಗಲೇ ಜಿ.ಪಂ.ನಿಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸಿಇಟಿ, ನೀಟ್ ಹಾಗೂ ಜೆಇಇ ತರಬೇತಿ ನೀಡಲಾಗುತ್ತಿದೆ. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ತರಬೇತಿ ಕೇಂದ್ರದಲ್ಲಿ ಪ್ರತ್ಯೇಕ ಸ್ಟುಡಿಯೋ ವ್ಯವಸ್ಥೆ ಇದೆ. ಹಾಸ್ಟೆಲ್ ವಿದ್ಯಾರ್ಥಿಗಳ ತರಬೇತಿಗೂ ಅದನ್ನೇ ಬಳಸಿಕೊಳ್ಳಲಾಗುವುದು. ವಾರಾಂತ್ಯದಲ್ಲಿ ಆಯಾ ಹಾಸ್ಟೆಲ್‌ಗಳ ವಾರ್ಡನ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಒದಗಿಸಿ ಆಫ್ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Related Articles
ಜಿಲ್ಲೆಯ ಮೆಟ್ರಿಕ್ ಅನಂತರದ ಸರಕಾರಿ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡುವ ಸಂಬಂಧ ಈಗಾಗಲೇ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚೆಯಾಗಿದೆ. ಅಲ್ಲದೆ ಈ ಸಂಬಂಧ ಒಂದು ಪ್ರಸ್ತಾವನೆಯೂ ಸಿದ್ಧವಿದೆ. ಆದರೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಯಾವ ರೀತಿಯಲ್ಲಿ ಕಾರ್ಯಾರೂಪಕ್ಕೆ ತರಬಹುದು ಮತ್ತು ವಿದ್ಯಾರ್ಥಿಗಳಿಗೆ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬ ಬಗ್ಗೆ ಇನ್ನಷ್ಟು ಚರ್ಚೆ ನಡೆಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್ ಮಾಹಿತಿ ನೀಡಿದರು.
Advertisement
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಲು ಪ್ರೈಮ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಆಸಕ್ತ ವಿದ್ಯಾರ್ಥಿಗಳ ನೋಂದಣಿ ಕಾರ್ಯ ನಡೆಯುತ್ತಿದೆ. ಎರಡು ವಾರದಲ್ಲಿ ತರಬೇತಿ ಆರಂಭವಾಗಲಿದೆ.-ಪ್ರಸನ್ನ ಎಚ್., ಸಿಇಒ, ಜಿ.ಪಂ. ಉಡುಪಿ