Advertisement

Submarine: ಜಲಾಂತರ್ಗಾಮಿ ತಂತ್ರಜ್ಞಾನ ನೀಡಲು ಪೈಪೋಟಿ

09:44 PM Aug 16, 2023 | Team Udayavani |

ನವದೆಹಲಿ: ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ನೂತನ ಜಲಾಂತರ್ಗಾಮಿಗಳ ಅಭಿವೃದ್ಧಿಗೆ ಮುಂದಾಗಿದ್ದು, ಅವುಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಸೇವೆ ಒದಗಿಸಲು ಜರ್ಮನಿ ಹಾಗೂ ಸ್ಪೇನ್‌ ಪೈಪೋಟಿಗೆ ಮುಂದಾಗಿವೆ. ಇಂಡೋ -ಪೆಸಿಫಿಕ್‌ನಲ್ಲಿ ಚೀನಾದ ಉದ್ಧಟತನಕ್ಕೆ ಕಡಿವಾಣ ಹಾಕಲು ಭಾರತ ಯೋಜಿಸಿರುವ ನಡುವೆಯೇ, ಈ ಬೆಳವಣಿಗೆ ವರದಿಯಾಗಿರುವುದು ಮಹತ್ವ ಪಡೆದುಕೊಂಡಿದೆ.

Advertisement

ದೇಶೀಯವಾಗಿಯೇ ನೌಕಾಬಲ ಹೆಚ್ಚಿಸಲು ಬಯಸಿರುವ ಭಾರತ ದೇಶಿಯ ಸಂಸ್ಥೆಗಳಲ್ಲೇ ಜಲಾಂತರ್ಗಾಮಿಗಳ ಉತ್ಪಾದನೆಗೆ ಮುಂದಾಗಿದೆ. ಈಗಾಗಲೇ ಹಲವು ಜಲಾಂತರ್ಗಾಮಿಗಳು ನೌಕಾಪಡೆಗೆ ಸೇರ್ಪಡೆಯೂಗೊಂಡಿವೆ. ಉಳಿದಂತೆ ಇನ್ನೂ 6 ಜಲಾಂತರ್ಗಾಮಿಗಳ ಅಭಿವೃದ್ಧಿ ಬಾಕಿ ಇದ್ದು, ಅವುಗಳಿಗೆ ತಂತ್ರಜ್ಞಾನ ಸೇರಿದಂತೆ ಇತರೆ ಅಗತ್ಯ ಉಪಕರಣ ಒದಗಿಸುವ ಸಂಸ್ಥೆಗಳಿಗಾಗಿ 400 ಶತಕೋಟಿ ರೂ.ಗಳ ಬಿಡ್ಡಿಂಗ್‌ ಕರೆಯಲಾಗಿದೆ. ಅದರಲ್ಲಿ ಜರ್ಮನಿ ಹಾಗೂ ಸ್ಪೇನ್‌ ಸಂಸ್ಥೆಗಳು ಪ್ರಮುಖ ಪೈಪೋಟಿಯಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next