Advertisement
ಸಿಕ್ಕಿರುವ ಹಣಕಾಸು ಮತ್ತು ಗುಪ್ತಚರ ಇಲಾಖೆ ಜವಾಬ್ದಾರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಟ್ಟುಕೊಳ್ಳುತ್ತಾರೆ. ಲೋಕೋಪಯೋಗಿ ಇಲಾಖೆ ಮೇಲೆ ಕಣ್ಣಿಟ್ಟಿದ್ದ ಎಚ್.ಡಿ. ರೇವಣ್ಣ ಇದೀಗ ಇಂಧನ ಖಾತೆ ಪಕ್ಷಕ್ಕೆ ಸಿಕ್ಕಿರುವುದರಿಂದ ಆ ಖಾತೆಯನ್ನು ಆರಿಸಿಕೊಳ್ಳುವುದು ಖಚಿತ. ಹೀಗಾಗಿ, ಲೋಕೋಪಯೋಗಿ ಇಲಾಖೆಗಾಗಿ ಆಕಾಂಕ್ಷಿಗಳ ಪೈಪೋಟಿ ಶುರುವಾಗಿದೆ. ಅದೇ ರೀತಿ ಅಬಕಾರಿ, ಸಾರಿಗೆ ಖಾತೆಗಳಿಗಾಗಿಯೂ ಹಲವರು ಪೈಪೋಟಿಗೆ ಬಿದ್ದಿದ್ದಾರೆ. ಬಸವರಾಜ ಹೊರಟ್ಟಿ, ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸತ್ಯನಾರಾಯಣ ಈ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಯೋಜನೆ ಮತ್ತು ಸಾಂಖೀಕ ಇಲಾಖೆಗಳು ಪಕ್ಷಕ್ಕೆ ಲಭ್ಯವಾಗಿದ್ದು, ಇವುಗಳಿಗೆ ಆಕಾಂಕ್ಷಿ ಪಟ್ಟಿಯಲ್ಲಿರುವ ಬಿ.ಎಂ.ಫಾರೂಕ್, ಎ.ಟಿ.ರಾಮಸ್ವಾಮಿ, ಎಚ್.ಕೆ. ಕುಮಾರಸ್ವಾಮಿ, ಶಿವಲಿಂಗೇಗೌಡ, ಸಾ.ರಾ. ಮಹೇಶ್, ಬಿಎಸ್‌ಪಿಯ ಮಹೇಶ್, ಕೃಷ್ಣಾರೆಡ್ಡಿ ಪೈಕಿ ಯಾರನ್ನು ನೇಮಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.