ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿರುವ ವಿಧಾನ್ ಪರಿಷತ್ ದ್ವಿ ಸದಸ್ಯ ಸ್ಥಾನದ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು, ಜನಪ್ರತಿನಿಧಿಗಳ ಸಂವಿಧಾನಬದ್ಧ ಹಕ್ಕನ್ನೇ ಕಸಿದುಕೊಳ್ಳಲು ಮುಂದಾಗಿದ್ದವು. ಗ್ರಾಪಂ ಸದಸ್ಯರಿಗೆ ಐದು ವರ್ಷದಲ್ಲಿ ಒಮ್ಮೆ ಸಿಗುವ ಈ ಮತದಾನದ ಅವಕಾಶ ದೊರೆಯಲು ಗ್ರಾಮ ಪಂಚಾಯಿತಿ ಸದಸ್ಯರ ಸ್ವಾಭಿಮಾನದ ಪ್ರತೀಕವಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ.
ಯಾರು ಎಷ್ಟೇ ಹಣದ ಹೊಳೆ ಹರಿಸಿದರೂ ನೀವು ಸ್ವಾಭಿಮಾನ ಬಿಡಬೇಡಿ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಹೇಳಿದರು. ತಾಲೂಕಿನ ನೀರಲಕೇರಿಯಲ್ಲಿ ನಡೆದ ಬಾಗಲಕೋಟೆ ತಾಲೂಕಿನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿಗಾಗಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಮಂಡಲ ಪಂಚಾಯಿತಿ ಇದ್ದಾಗ ಇದ್ದ ಎಲ್ಲ ಅಧಿಕಾರಗಳನ್ನು ಇಂದು ಶಾಸಕರು ಕಸಿದುಕೊಂಡಿದ್ದಾರೆ. ಕನಿಷ್ಠ ಆಶ್ರಯ ಮನೆ ಆಯ್ಕೆ ಮಾಡುವ ಅಧಿಕಾರವೂ ಗ್ರಾಪಂಗೆ ಇಲ್ಲದಂತಾಗಿದೆ. ಗ್ರಾಪಂಗಳಿಗೆ ಮೊದಲಿದ್ದ ಅಧಿಕಾರ ಮರಳಿ ಕೊಡಿಸಬೇಕು. ಗ್ರಾಪಂ ಸದಸ್ಯರಿಗೆ ಸದ್ಯ 1 ಸಾವಿರ, ಉಪಾಧ್ಯಕ್ಷರಿಗೆ ಎರಡು ಸಾವಿರ ಹಾಗೂ ಅಧ್ಯಕ್ಷರಿಗೆ ಮೂರು ಸಾವಿರ ಗೌರವಧನವಿದೆ. ಅದೇ ಶಾಸಕರು, ಸಂಸದರಿಗೆ ಲಕ್ಷಾಂತರ ರೂ. ಗೌರವಧನ ಬರುತ್ತಿದ್ದು, ಕನಿಷ್ಠ ಗೌರವಧನದಿಂದ ಗ್ರಾ.ಪಂ. ಸದಸ್ಯರು ಸಭೆ-ಸಮಾರಂಭಕ್ಕೂ ತೆರಳುವ ಬಸ್ ಚಾಚ್ ìಗೆ ಸಾಲುವುದಿಲ್ಲ. ಹೀಗಾಗಿ ಗೌರವಧನ ಹೆಚ್ಚಿಸಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳ ಪ್ರತಿ ಸದಸ್ಯರು ಜಿಲ್ಲೆಯಾದ್ಯಂತ ಕೆಲಸ-ಕಾರ್ಯಗಳಿಗೆ ಸಂಚರಿಸಲು ಉಚಿತ ಬಸ್‌ಪಾಸ್, ಅವರ ಕುಟುಂಬದವರಿಗೆ ಉಚಿತ ಆರೋಗ್ಯ ಸೇವೆ, ಜಿಪಂ, ತಾಪಂ ಸದಸ್ಯರಿಗೆ ನೀಡುವ ಪ್ರದೇಶಾಭಿವೃದ್ಧಿ ಅನುದಾನ ಗ್ರಾಪಂ ಸದಸ್ಯರಿಗೂ ವಿಸ್ತರಿಸಿ, ಅವರಿಗೆ ಪ್ರತಿವರ್ಷ ಅನುದಾನ ಬಿಡುಗಡೆ ಮಾಡಿ, ಗ್ರಾಮದಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಧಿಕಾರ ದೊರೆಯಬೇಕು. ಸ್ಥಳೀಯ ಸಂಸ್ಥೆಗಳ ಸಹಕಾರಿ ಒಕ್ಕೂಟ ರಚಿಸಿ, ಆ ಮೂಲಕ ಸದಸ್ಯರಿಗೆ ವಿವಿಧ ಆರ್ಥಿಕ ನೆರವು, ಹಲವು ಸೌಲಭ್ಯ ಒದಗಿಸಬೇಕಿದೆ. ಮಾಜಿ ಸದಸ್ಯರಿಗೆ ಈ ಒಕ್ಕೂಟದಲ್ಲಿ ಸದಸ್ಯತ್ವ ಕಲ್ಪಿಸಿ, ಸೌಲಭ್ಯ ನೀಡಬೇಕು.
ಗ್ರಾಪಂ ಸದಸ್ಯರಿಗೆ ಅನ್ಯಾಯ, ಸಮಸ್ಯೆಗಳಿಗೆ ಒಕ್ಕೂಟದಿಂದ ತಕ್ಷಣ ನೆರವಿಗೆ ಬರಬೇಕು. ಈ ನಿಟ್ಟಿನಲ್ಲಿ ಒಕ್ಕೂಟದ ಅವಶ್ಯಕತೆ ಇದೆ. ಗ್ರಾಮೀಣ ಅಭಿವೃದ್ಧಿಗಾಗಿ ಸದಸ್ಯರು ಯಾವುದೇ ಕಚೇರಿಗೆ ಹೋದರೂ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಅವರ ಕೆಲಸ ಕಾರ್ಯ ಮಾಡಿ ಕೊಡಬೇಕು. ಇದಕ್ಕಾಗಿ ಸರ್ಕಾರದಿಂದ ಎಲ್ಲ ಇಲಾಖೆಗಳಿಗೂ ವಿಶೇಷ ಸೂಚನೆ- ನಿರ್ದೇಶನ ಹೋಗಬೇಕು. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುವುದಾಗಿ ಹೇಳಿದರು.
ನಾನು ಅಖಂಡ ವಿಜಯಪುರ ಜಿಲ್ಲೆಯ ಜಿಪಂ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಇರುವವರನ್ನೇ ಆಯ್ಕೆ ಮಾಡಬೇಕು. ಹಣಬಲ, ತೋಳ್ಬಲ ಇದ್ದವರು ಆಯ್ಕೆಯಾದರೆ, ಆರು ವರ್ಷ ಸದಸ್ಯರ ಸಮಸ್ಯೆಯನ್ನೇ ಕೇಳಲು ಬರುವುದಿಲ್ಲ. ಹೀಗಾಗಿ ಎಲ್ಲ ಸದಸ್ಯರು ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಬಾಗಲಕೋಟೆ ತಾಲೂಕಿನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಹಲವು ಮುಖಂಡರು ಪಾಲ್ಗೊಂಡಿದ್ದರು.
ಈ ಚುನಾವಣೆಯಲ್ಲಿ ಗ್ರಾಪಂ ಸದಸ್ಯರನ್ನೇ ಮಾತನಾಡಿಸದಂತಹ ಪರಿಸ್ಥಿತಿ ಇತ್ತು. ಲೋಣಿ ಅವರ ಸ್ಪರ್ಧೆಯಿಂದ ಈಗ ಎರಡೂ ಪಕ್ಷಗಳ ಅಭ್ಯರ್ಥಿಗಳು ನಮ್ಮತ್ತ ಕೈಮುಗಿದು ಬರುತ್ತಿದ್ದಾರೆ. ನಮಗೂ ಸ್ವಾಭಿಮಾನವಿದೆ. ಗ್ರಾಪಂ ಸದಸ್ಯರ ಗೌರವ ಎತ್ತಿ ಹಿಡಿದವರ ಪರವಾಗಿ ಮತ ಚಲಾಯಿಸಬೇಕಿದೆ.
ಅಡಿವೆಪ್ಪ ಶಾಸ್ತ್ರಿ, ಚಿಕ್ಕಶೆಲ್ಲಿಕೇರಿ ಗ್ರಾಪಂ ಸದಸ