Advertisement
ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅಡ್ಡಿಯಾಗಿದ್ದ ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮದ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3 (2)(ಐ)(ಸಿ) ಅಕ್ರಮ ಮತ್ತು ಸಂವಿಧಾನಬಾಹಿರ ಎಂದು ಹೇಳಿರುವ ಹೈಕೋರ್ಟ್, ಈ ನಿಯಮ ದಲ್ಲಿದ್ದ “ಅವಿವಾಹಿತ’ ಪದವನ್ನು ತೆಗೆದುಹಾಕಿದೆ.
ವಿವಾಹಿತೆಯಾಗಿದ್ದರೂ ಹೆತ್ತವರಿಗೆ ಪುತ್ರಿಯೇ. ಆಕೆ ಅನುಕಂಪದ ಉದ್ಯೋಗಕ್ಕೆ ಅರ್ಹಳಲ್ಲ ಎಂಬ ನಿಯಮ ಲಿಂಗ ತಾರತಮ್ಯ ಮಾಡುತ್ತದೆ. ಪುತ್ರನ ವೈವಾಹಿಕ ಸ್ಥಾನಮಾನ ಅನುಕಂಪದ ಉದ್ಯೋಗಕ್ಕೆ ಅರ್ಹವಾಗಿರುವಾಗ, ವಿವಾಹಿತ ಮಗಳು ಕೂಡ ಅರ್ಹರಾಗಿರುತ್ತಾಳೆ ಎಂದು ಕೋರ್ಟ್ ತಿಳಿಸಿದೆ.