Advertisement

ಕೊಯಿಲದಲ್ಲಿ  ಕೋಮು ಸಂಘರ್ಷ;  ಹೊಡೆದಾಟ

11:31 AM Feb 22, 2017 | Team Udayavani |

ಕಡಬ: ಕೊçಲ ಗ್ರಾಮದ ಗೋಕುಲ ನಗರದಲ್ಲಿ ಅನ್ಯಕೋಮಿನ ವ್ಯಕ್ತಿಯ ಮನೆಯಲ್ಲಿ ಹಿಂದೂ ಹುಡುಗಿಯರು ತಂಗಿರುವುದನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಎರಡೂ 
ಕೋಮುಗಳ ಯುವಕರ ನಡುವೆ ಹೊಡೆದಾಟ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ಸುದ್ದಿ ತಿಳಿದ ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ಯುವತಿಯರನ್ನು ವಶಕ್ಕೆ ತೆಗೆದುಕೊಂಡು ಮನೆಯ ಬಳಿ ಜಮಾಯಿಸಿದ್ದ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ಠಾಣೆಗೆ ಕರೆತಂದ ಯುವತಿಯರನ್ನು ವಿಚಾರಣೆಗೊಳಪಡಿಸಿ ಅವರ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಹಿನ್ನೆಲೆ: ಮೂಲತಃ ಮರ್ದಾಳ ನಿವಾಸಿ ಪ್ರಸ್ತುತ ಕೊçಲದ ಗೋಕುಲನಗರದಲ್ಲಿ ವಾಸ್ತವ್ಯವಿರುವ ಮುಸ್ಲಿಂ ಧರ್ಮಗುರು ಮಹಮ್ಮದ್‌ ಅವರ ಮನೆಯಲ್ಲಿ ಅವರ ಪುತ್ರಿಯ ಸಹಪಾಠಿಗಳಾದ ಮೂವರು ಹಿಂದೂ ಯುವತಿಯರು ಕಳೆದ 2 ದಿನಗಳಿಂದ ತಂಗಿರುವುದು ಗೊಂದಲಕ್ಕೆ ಕಾರಣವಾಯಿತು. ಮಹಮ್ಮದ್‌ ಅವರ ಪುತ್ರಿ ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿ.

ಆಕೆ ಶನಿವಾರ ಕೊçಲದ ತನ್ನ ಮನೆಗೆ ಬರುವಾಗ ಆಕೆಯ ಸಹಪಾಠಿಗಳಾದ ಹೊರ ರಾಜ್ಯದ ಮೂವರು ಹಿಂದೂ ಯುವತಿಯರನ್ನು ಕೂಡ ಕರೆತಂದಿದ್ದರು. ಅವರೆಲ್ಲರೂ ಬುಧವಾರ ಮೈಸೂರಿಗೆ ವಾಪಾಸಾಗುವವರಿದ್ದರು. ಈ ಹಿಂದೆಯೂ ಆ ಸ್ನೇಹಿತೆಯರು ಕೊçಲದಲ್ಲಿ ಬಂದು 4 ದಿನ ತಂಗಿದ್ದರು ಎನ್ನಲಾಗಿದೆ.

ಆದರೆ ಹಿಂದೂ ಯುವತಿಯರು ಅನ್ಯಕೋಮಿ ನವರ ಮನೆಯಲ್ಲಿರುವ ಸುದ್ದಿ ಸ್ಥಳೀಯ ಹಿಂದೂ ಪರ ಸಂಘಟನೆಗಳ ಕಾರ್ಯ ಕರ್ತರ ಗಮನಕ್ಕೆ ಬಂದು ಅವರು ಯುವತಿಯರು ತಂಗಿದ್ದ ಮನೆ ಎದುರು ಜಮಾಯಿಸಿದರು. 
ಸುದ್ದಿ ಹರಡಿ ಇನ್ನೊಂದು ಕೋಮಿನ ಯುವಕರೂ ಅಲ್ಲಿಗೆ ಆಗಮಿಸಿದರು. ಆ ಹೊತ್ತಿಗೆ ಕೊçಲದಲ್ಲಿ ಗಸ್ತುನಿರತರಾಗಿದ್ದ ಕಡಬ ಠಾಣಾ ಪೊಲೀಸರೊಬ್ಬರಿಗೆ ವಿಚಾರ ಗೊತ್ತಾಗಿ ಅವರು ತತ್‌ಕ್ಷಣ ಘಟನೆಗೆ ಸಂಬಂಧಿಸಿದ ಮನೆಗೆ ತೆರಳಿ ವಿಷಯ ಗಂಭೀರವಾಗದಂತೆ ನೋಡಿಕೊಂಡರು. 

Advertisement

ಬಳಿಕ ಕಡಬ ಪ್ರಭಾರ ಎಸ್‌ಐ ಆನಂದ ಪೂಜಾರಿ ಹಾಗೂ ಸಿಬಂದಿ ಸ್ಥಳಕ್ಕೆ ಆಗಮಿಸಿ ಮನೆಯಲ್ಲಿದ್ದ ಯುವತಿಯರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಗುಂಪುಗೂಡಿದ್ದ ಜನರ ನಡುವೆ ಮಾತಿನ ಚಕಮಕಿಯೂ ನಡೆಯಿತು. 

ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಕಡಬ ಪೊಲೀಸ್‌ ಠಾಣೆಗೆ ಕರೆದು ಕೊಂಡು ಹೋದರು.

ತಂಡಗಳ ಹೊಡೆದಾಟ
ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಯುವತಿಯರನ್ನು ಸ್ಥಳದಿಂದ ಕರೆದೊಯ್ದ ಮೇಲೆ ಅಲ್ಲಿ ಯಾವುದೇ ಪೊಲೀಸರಿರಲಿಲ್ಲ. ಆ ವೇಳೆ ದೂರದ ಉಪ್ಪಿನಂಗಡಿ, ಕಡಬ, ಆತೂರು, ರಾಮಕುಂಜ, ಆಲಂಕಾರು, ಪುತ್ತೂರು ಮೊದಲಾದ ಕಡೆಗೆ ವಿಷಯ ತಿಳಿದು ಬಾರೀ  ಸಂಖ್ಯೆಯಲ್ಲಿ ಎರಡೂ ಕೋಮುಗಳ ಜನ ಜಮಾಯಿಸಿದರು. ಪರಿಸ್ಥಿತಿ ಉದ್ವಿಘ್ನಗೊಂಡು ಹೊಡೆದಾಟವೂ ನಡೆಯಿತು. ಆ ಹಂತದಲ್ಲಿ ಕಡಬ ಹಾಗೂ ಉಪ್ಪಿನಂಗಡಿಯಿಂದ ಪೊಲೀಸರು ಆಗಮಿಸಿ ಪರಿಸ್ಥಿತ್ನಿ ನಿಯಂತ್ರಿಸಿದರು. ಹೊಡೆದಾಟದಲ್ಲಿ ನವೀನ್‌ ಗಾಯಗೊಂಡರು. ಡಿವೈ ಎಸ್‌ಪಿ ಭಾಸ್ಕರ್‌ ರೈ,  ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಹಾಗೂ ಪೊಲೀಸ್‌  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next