Advertisement

ಕಾಮನ್ವೆಲ್ತ್‌ ಗೇಮ್ಸ್‌ ಟಿ20: ನೇರ ಪ್ರವೇಶ ಪಡೆದ ಭಾರತ

11:34 PM Apr 26, 2021 | Team Udayavani |

ದುಬಾೖ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಕಾಮನ್ವೆಲ್ತ್‌ ಗೇಮ್ಸ್‌ ನಲ್ಲಿ ವನಿತಾ ಟಿ20 ಕ್ರಿಕೆಟ್‌ ಸ್ಪರ್ಧೆಗೆ ಬಾಗಿಲು ತೆರೆದಿದೆ. ಇದರಲ್ಲಿ 8 ತಂಡಗಳು ಪಾಲ್ಗೊಳ್ಳಲಿದ್ದು, ರ್‍ಯಾಂಕಿಂಗ್‌ ಆಧಾರದ ಮೇಲೆ ಭಾರತ ಸೇರಿದಂತೆ 6 ತಂಡಗಳು ನೇರ ಪ್ರವೇಶ ಪಡೆದಿವೆ. ಉಳಿದೆರಡು ತಂಡಗಳನ್ನು ಅರ್ಹತಾ ಸ್ಪರ್ಧೆ ಮೂಲಕ ಆರಿಸಲಾಗುವುದು ಎಂದು ಐಸಿಸಿ ಸೋಮವಾರ ತಿಳಿಸಿದೆ.

Advertisement

ಉಳಿದ 5 ತಂಡಗಳೆಂದರೆ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಇಂಗ್ಲೆಂಡ್‌. ಎರಡು ಅರ್ಹತಾ ತಂಡಗಳಲ್ಲಿ ಒಂದು ತಂಡ ಕೆರಿಬಿಯನ್‌ ದ್ವೀಪದ್ದಾಗಲಿದೆ. ಇಲ್ಲಿನ ದ್ವೀಪ ರಾಷ್ಟ್ರಗಳು ವೆಸ್ಟ್‌ ಇಂಡೀಸ್‌ ಎಂಬ ಹೆಸರಿನಲ್ಲಿ ಸ್ಪರ್ಧಿಸದೆ ಪ್ರತ್ಯೇಕವಾಗಿ ಕಣಕ್ಕಿಳಿಯಲಿವೆ. ಅರ್ಹತಾ ಪಂದ್ಯಾವಳಿ 2022ರ ಜನವರಿ 31ರ ಒಳಗೆ ನಡೆಯಲಿದೆ.

ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ ವೇಳೆ ವನಿತಾ ಕ್ರಿಕೆಟ್‌ ಪಂದ್ಯಗಳೆಲ್ಲ ಎಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ವರ್ಷಾಂತ್ಯ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ.

1998ರ ಕೌಲಾಲಂಪುರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮೊದಲ ಸಲ ವನಿತಾ ಕ್ರಿಕೆಟ್‌ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಅದು ಏಕದಿನ ಪಂದ್ಯವಾಗಿತ್ತು. ದಕ್ಷಿಣ ಆಫ್ರಿಕಾ ವನಿತೆಯರು ಚಿನ್ನ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next