Advertisement

200 ಮೀ. ಓಟ:  ಸೆಮಿಫೈನಲ್‌ಗೆ ಹಿಮಾ ದಾಸ್‌

08:26 PM Aug 04, 2022 | Team Udayavani |

ಬರ್ಮಿಂಗ್‌ಹ್ಯಾಮ್‌ :  ಭಾರತದ ಸ್ಟಾರ್‌ ಓಟಗಾರ್ತಿ ಹಿಮಾ ದಾಸ್‌ ವನಿತೆಯರ 200 ಮೀ. ರೇಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.

Advertisement

ಗುರುವಾರದ ಹೀಟ್‌ನಲ್ಲಿ ಅವರು 23.42 ಸೆಕೆಂಡ್‌ಗಳ ಸಾಧನೆಯೊಂದಿಗೆ ಮೊದಲ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಹೀಟ್‌ನಲ್ಲಿ ಐವರು ಸ್ಪರ್ಧೆಯಲ್ಲಿದ್ದರು. ಜಾಂಬಿಯದ ರೋಡಾ ಎನ್‌ಜೊಬ್ವು ದ್ವಿತೀಯ (23.85 ಸೆ.), ಉಗಾಂಡದ ಜಸೆಂಟ್‌ ನ್ಯಮುಂಗೆ ತೃತೀಯ ಸ್ಥಾನಿಯಾದರು (24.07 ಸೆ.).

ಒಟ್ಟು 6 ಹೀಟ್ಸ್‌ಗಳನ್ನು ಹೊಂದಿದ್ದು, ಅಗ್ರ 16 ಸ್ಥಾನ ಪಡೆದವರು ಸೆಮಿಫೈನಲ್‌ ಪ್ರವೇಶಿಸಿದ್ದಾರೆ.  ಹಿಮಾ ದಾಸ್‌ 2ನೇ ಹೀಟ್‌ನಲ್ಲಿದ್ದರು. ಮೊದಲ ಹೀಟ್‌ನಲ್ಲಿದ್ದ ನೈಜೀರಿಯದ ಫೇವರ್‌ ಒಫಿಲಿ (22.71 ಸೆ.) ಮತ್ತು 5ನೇ ಹೀಟ್‌ನಲ್ಲಿದ್ದ ಎಲೈನ್‌ ಥಾಮ್ಸನ್‌ ಹೆರಾ (22.80 ಸೆ.) ಮಿಂಚಿನ ಓಟ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next