ಪ್ರಸಕ್ತ ಏಶ್ಯಾಡ್ ಬಾಕ್ಸಿಂಗ್‌ನಲ್ಲಿ ಫೈನಲ್ ತಲುಪಿದ ಭಾರತದ ಏಕೈಕ ಬಾಕ್ಸರ್ ಎಂಬುದು ಅಮಿತ್ ಪಾಂಗಾಲ್ ಪಾಲಿನ ಹೆಗ್ಗಳಿಕೆ.
Advertisement
ಪಾಲಮ್ ವಿರುದ್ಧ ಸಾಮಾನ್ಯ ಮಟ್ಟದ ಆರಂಭ ಪಡೆದ ಅಮಿತ್, ಬಳಿಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಪಾಲಮ್ ಆಕ್ರಮಣಕಾರಿಯಾಗಿ ಮುನ್ನುಗ್ಗಿದರೆ, “ಆರ್ಮಿ ಮ್ಯಾನ್’ ಅಮಿತ್ ಬಳಿಕ ಹೋರಾಟವನ್ನು ತೀವ್ರಗೊಳಿಸಿದರು. ಆದರೆ ಶನಿವಾರದ ಫೈನಲ್ ಅಮಿತ್ ಪಾಂಗಾಲ್ ಪಾಲಿಗೆ ಕಠಿನವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಲ್ಲಿ ಭಾರತೀಯನಿಗೆ ಎದುರಾ ಗುವವರು ರಿಯೋ ಒಲಿಂಪಿಕ್ಸ್ ಚಾಂಪಿಯನ್, ಉಜ್ಬೆಕಿಸ್ಥಾನದ ಹಸನ್‌ಬಾಯ್ ದುಸ್ಮತೋವ್.