Advertisement

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬರ್ತ್ ಡೇ ಗೆ ಸಿಡಿಪಿ ರಿಲೀಸ್‌

07:58 AM Feb 15, 2021 | Team Udayavani |

ಫೆ.16 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕಾಮನ್‌ ಡಿಪಿವೊಂದನ್ನು ತಯಾರಿಸಿದ್ದು, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆಯಾಗಿದೆ.

Advertisement

ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ತಯಾರಾಗಿರುವ ಈ ಡಿಪಿಯಲ್ಲಿ ದರ್ಶನ್‌ ಅವರ ಫೋಟೋಗ್ರಫಿ ಪ್ರೀತಿಯನ್ನು ತೋರಿಸುತ್ತಿದೆ. ಕಾಡಿನ ಮಧ್ಯದಲ್ಲಿ ಕ್ಯಾಮರಾ ಹಿಡಿದು ಕುಳಿತಿರುವ ದರ್ಶನ್‌ ಹಾಗೂ ಸುತ್ತಲೂ ವನ್ಯ ಜೀವಿಗಳಿರುವ ಸ್ಕೆಚ್‌ ಬಿಡಿಸಲಾಗಿದೆ.

ಇದನ್ನೂ ಓದಿ:ಕರ್ನಾಟಕಕ್ಕೆ ಟೆಸ್ಲಾ: ಇವಿ ವಲಯದ ಕಿರೀಟಕ್ಕೆ ಇನ್ನೊಂದು ಗರಿ

ಇದರಲ್ಲಿ “ಬಾಸ್‌ ಪರ್ವ, ಸುಲ್ತಾನ್‌ ಸಂಭ್ರಮ’ ಎಂಬ ಬರಹದ ಮೂಲಕ ಅಭಿಮಾನಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬಹಳಷ್ಟು ನಟರು ಶೇರ್ ಮಾಡಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ದರ್ಶನ್‌ ಧನ್ಯವಾದ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next