Advertisement

ಖಾಸಗಿ ವೃತ್ತಿಪರ ಕಾಲೇಜಿನ ಪ್ರವೇಶ ನಿಯಂತ್ರಣಕ್ಕೆ ಸಮಿತಿ

07:05 AM Jul 29, 2017 | Team Udayavani |

ಬೆಂಗಳೂರು: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ನೇತೃತ್ವದಲ್ಲಿ ಖಾಸಗಿ ವೃತ್ತಿಪರ ಕಾಲೇಜಿನ ಪ್ರವೇಶ ಮೇಲ್ವಿಚಾರಣಾ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿರ್ಧರಿಸುವ) ಕಾಯ್ದೆ ಅನ್ವಯ ರಾಜ್ಯ ಸರ್ಕಾರವು ಖಾಸಗಿ ವೃತ್ತಿಪರ ಕಾಲೇಜಿನ ಶುಲ್ಕ ನಿರ್ಧಾರ ಹಾಗೂ ಪ್ರವೇಶ ನಿಯಂತ್ರಣಕ್ಕೆ 2015-16ರಿಂದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 2 ಪ್ರತ್ಯೇಕ ಸಮಿತಿಯನ್ನು 1 ವರ್ಷದ ಅವಧಿಗೆ ನೇಮಿಸಿಕೊಂಡು ಬರುತ್ತಿದೆ.

Advertisement

2017-18ನೇ ಸಾಲಿಗೆ ಈ ಎರಡು ಸಮಿತಿಗೆ ನಿವೃತ್ತ ನ್ಯಾಯಾಧೀಶರ ಹೆಸರನ್ನು ಸೂಚಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸರ್ಕಾರದಿಂದ ಪತ್ರ ಬರೆಯಲಾಗಿತ್ತು. ಅದರಂತೆ ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಆನಂದ ಭೈರಾ ರೆಡ್ಡಿ ಹೆಸರನ್ನು ಶಿಫಾರಸು ಮಾಡಿದೆ.

ರಾಜ್ಯ ಸರ್ಕಾರವು ನಿವೃತ್ತ ನ್ಯಾ.ಆನಂದ ಭೈರಾರೆಡ್ಡಿಯವರ ನೇತೃತ್ವದಲ್ಲಿ ಮೂವರು ಸದಸ್ಯರು ಹಾಗೂ ಓರ್ವ
ಸದಸ್ಯ ಕಾರ್ಯದರ್ಶಿ ಹೊಂದಿರುವ ಪ್ರವೇಶ ಮೇಲ್ವಿಚಾರಣಾ ಸಮಿತಿ ರಚಿಸಿದೆ. ಸಮಿತಿಯ ಸದಸ್ಯರಾಗಿ
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ಅಥವಾ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಪತಿಯ ಜತೆಗೆ ಶಿಕ್ಷಣ ಕ್ಷೇತ್ರದಿಂದ ಒಬ್ಬರನ್ನು ಮತ್ತು ವೈದ್ಯ ಹಾಗೂ ಎಂಜಿನಿಯರಿಂಗ್‌ ಕ್ಷೇತ್ರದಿಂದ ತಲಾ ಒಬ್ಬರನ್ನು ಸಮಿತಿಯ ಅಧ್ಯಕ್ಷರೇ ಸದಸ್ಯರನ್ನಾಗಿ ನೇಮಿಸಲಿದ್ದಾರೆ. ವೈದ್ಯಕೀಯ ಅಥವಾ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಒಂದು ವರ್ಷದ ಅವಧಿಯಲ್ಲಿ ಸಮಿತಿಯು ಖಾಸಗಿ ವೃತ್ತಿಪರ ಕಾಲೇಜಿನ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ
ಪರಿಶೀಲನೆ ನಡೆಸಿ, ಅಕ್ರಮಗಳು ಕಂಡುಬಂದಲ್ಲಿ ಕಾಲೇಜುಗಳ ವಿರುದಟಛಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next