Advertisement

ಗ್ರಾಮೀಣ ಮತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

09:50 AM Jun 05, 2018 | Team Udayavani |

ಕಲಬುರಗಿ: ಹೆಚ್ಚಿನ ನಿರೀಕ್ಷೆ ಹಾಗೂ ವಿಶ್ವಾಸವಿಟ್ಟು ಗೆಲ್ಲಿಸಿರುವ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಬದ್ಧವಿರುವುದಾಗಿ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

Advertisement

ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಆಳಂದ ತಾಲೂಕಿನ ಸುಕ್ಷೇತ್ರ ನರೋಣಾದಲ್ಲಿ ಗ್ರಾಮಸ್ಥರ ಹಾಗೂ ಪಕ್ಷದ ಕಾರ್ಯಕರ್ತರಿಂದ ಅದ್ಧೂರಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಸಂಚರಿಸಿ ಆಯ್ಕೆಗೊಳಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಪ್ರವಾಸ ಕೈಗೊಳ್ಳಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜನರ ಸಮಸ್ಯೆ ಆಲಿಸಿ ಪಟ್ಟಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತದಲ್ಲಿ ಸಮಸ್ಯೆ ಈಡೇರಿಕೆಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಕ್ಷೇತ್ರದ ಹಿರಿಯರ, ಪಕ್ಷದ ಕಾರ್ಯಕರ್ತರ ಸಲಹೆ-ಮಾರ್ಗದರ್ಶನದಂತೆ ಹೆಜ್ಜೆ ಇಡಲಾಗುವುದು. ರಾಜ್ಯದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಸರ್ಕಾರವಿದ್ದರೂ ಕ್ಷೇತ್ರಕ್ಕೆ ದೊರೆ ಯುವ ಅನುದಾನವನ್ನು ಕ್ಷೇತ್ರದ ಎಲ್ಲ ಕಡೆ ವಿನಿಯೋಗಿಸಲಾಗುವುದು. ಸರ್ಕಾರದ ಯೋಜನೆ ಗಳನ್ನು ಅರ್ಹರಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ, ಕಲಬುರಗಿ ಗ್ರಾಮೀಣ ಮಂಡಲ ಅಧ್ಯಕ್ಷ ಶರಣು ಸಲಗರ, ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ, ಮುಖಂಡರಾದ ರಾಜಕುಮಾರ ಕೋಟೆ, ಶಿವಾನಂದ ಬೋಳಶೆಟ್ಟಿ, ಶಿವಕುಮಾರ ಸರಸಂಬಿ, ಶಂಭುಲಿಂಗ ದಳಪತಿ, ಶರಣು ಸಾವಳಗಿ, ಭೈರಾಮ ರಾಠೊಡ, ಯಲ್ಲಾಲಿಂಗ ಯಳಸಂಗಿ, ಪ್ರಭಾಕರ ಪಾಟೀಲ, ಲಕ್ಷ್ಮೀಪುತ್ರ ಗುತ್ತೇದಾರ, ನಾಯ್ಯ ಬಾಳಿ, ಚೆನ್ನು ಬಾಳಿ, ಮಂಜುನಾಥ ಕೋರೆ, ಈರಣ್ಣ ಸಿ, ರವಿ ಹರಳಯ್ನಾ, ಶಿವಪುತ್ರ ರಾಗಿ, ಹರಳಯ್ಯ ರಾಗಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next