ತುಮಕೂರು: ಪ.ಜಾತಿಯ ಎಲ್ಲಾ ಒಳಪಂಗಡಗಳು ಒಗ್ಗೂಡಿ ಸಹಕಾರ ನೀಡಿದರೆ ತುಮಕೂರು ಗ್ರಾಮಾಂತರ ಕ್ಷೇತ್ರದ ಎಸ್ಸಿ, ಎಸ್ಟಿ ಕಾಲೋನಿಗಳ ಮೂಲಭೂತ ಸೌಕರ್ಯಗಳ ಜೊತೆಗೆ, ಅವರ ಅರ್ಥಿಕ ಅಭಿವೃದ್ಧಿಗೂ ನನ್ನ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ತುಮಕೂರು ಗ್ರಾಮಾಂ ತರ ಕ್ಷೇತ್ರದ ಪ.ಜಾತಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆಳಗುಂಬ ವೆಂಕಟೇಶ್ ಮತ್ತು ಕಾರ್ಯಾಧ್ಯಕ್ಷ ಕುಮಾರ್ ಅವರಿಗೆ ನೇಮಕಾತಿ ವಿತರಿಸಿ ಮಾತನಾಡಿ, ಪ.ಜಾತಿಯಲ್ಲಿ ಪ್ರಮುಖವಾಗಿರುವ ಎಡಗೈ, ಬಲಗೈ, ಬೋವಿ, ಲಂಬಾಣಿ ಇನ್ನಿತರ ಜಾತಿಗಳ ಜನರು ತಮ್ಮಲ್ಲಿರುವ ಅಂತರಿಕ ಭಿನ್ನಾಭಿ ಪ್ರಾಯವನ್ನು ಬದಿಗೊತ್ತಿ ಒಗ್ಗೂಡಿ ಸರ್ಕಾರದ ಸವಲತ್ತು ಪಡೆಯಲು ಮುಂದಾದಲ್ಲಿ ಕಾಲೋನಿಗಳ ಅಭಿವೃದ್ಧಿಗೆ ಬೇಕಾದ ಎಲ್ಲಾ ನೆರವು ನೀಡಲು ಕ್ಷೇತ್ರದ ಶಾಸಕನಾಗಿ ನಾನು ಸಿದ್ದನಿದ್ದೇನೆ ಎಂದರು.
ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಷ್ಠಾವಂತರಾಗಿ ದುಡಿಯುತ್ತಿದ್ದ ಕಾರ್ಯಕರ್ತರನ್ನು ಗುರುತಿಸಿ, ಅವರನ್ನು ಪಕ್ಷದ ತಾಲೂಕು ಅಧ್ಯಕ್ಷ, ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇನ್ನು ಮುಂದೆ ಅವರು ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಲು ಇತರೆ ವರ್ಗಗಳ ಮುಖಂಡರೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ವಿಭಾಗದ ಅಧ್ಯಕ್ಷರಾಗಿ ಬೆಳಗುಂಬ ವೆಂಕಟೇಶ್ ಹಾಗೂ ಕಾರ್ಯಾ ಧ್ಯಕ್ಷರಾಗಿ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಬೆಳಗುಂಬ ವೆಂಕಟೇಶ್ ಮಾತನಾಡಿ, ನನ್ನನ್ನು ಗ್ರಾಮಾಂತರ ಕ್ಷೇತ್ರದ ಎಸ್.ಸಿ ಘಟಕಕ್ಕೆ ಆಯ್ಕೆ ಮಾಡಿದ ಶಾಸಕರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ತುಮಕೂರು ಗ್ರಾಮಾಂತರ ಕ್ಷೇತ್ರದ ತಾ. ಅಧ್ಯಕ್ಷ ಹಾಲ ನೂರು ಅನಂತಕುಮಾರ್, ಮುಖಂಡರಾದ ಪಾಲನೇತ್ರಯ್ಯ, ಗೂಳೂರು ಕೃಷ್ಣೇಗೌಡರು, ವೆಂಕಟೇಗೌಡರು, ದೇವ ರಾಜು, ಕುಂಭಣ್ಣ, ಪ್ರಸನ್ನ, ಸೀಬಣ್ಣ ಇದ್ದರು.