Advertisement

ಜೀವನದಲ್ಲಿ ಸಾಧನೆ ಮಾಡಲು ಬೇಕು ಬದ್ಧತೆ: ಭಟ್‌

05:40 PM Jul 16, 2018 | Team Udayavani |

ಯಲ್ಲಾಪುರ: ಪಟ್ಟಣದ ಅಡಕೆ ಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ‘ಕೇಪಿನ ಡಬ್ಬಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವಕಥಾ ಪ್ರಶಸ್ತಿ ಪುರಸ್ಕೃತ ಲೇಖಕ ಪದ್ಮನಾಭ ಭಟ್ಟ ಶೇವ್ಕಾರ ಮತ್ತು ಅಘನಾಶಿನಿ ಸಾಕ್ಷ್ಯಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಅಶ್ವಿ‌ನಿಕುಮಾರ ಭಟ್ಟ, ಸಹನಾ ಬಾಳ್ಕಲ್‌ ಅವರನ್ನು ಸನ್ಮಾನಿಸಲಾಯಿತು. ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಟಾರ್‌, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಬದ್ಧತೆ ಇರಬೇಕು. ಸಾಧಕರು ಸಾಧನೆಗೆ ಸ್ಫೂರ್ತಿಯಾದ ತಮ್ಮ ಊರನ್ನು ಮರೆಯಬಾರದು ಎಂದರು.

Advertisement

ಸನ್ಮಾನ ಸ್ವೀಕರಿಸಿದ ಪದ್ಮನಾಭ ಶೇವ್ಕಾರ ಮಾತನಾಡಿ, ಯಾವುದೇ ವಿಷಯದಲ್ಲಿ ಅಂತಃಸತ್ವ ಅರಿಯದೇ ಸಾಗಿದರೆ ವಿನಾಶ ಖಚಿತ. ಸಮಾಜದಲ್ಲಿನ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಸಾಹಿತಿಗಳಿಂದ ಆಗಬೇಕು ಎಂದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಡಾ| ಶ್ರೀಧರ ಬಳಗಾರ, ಕೃತಿಯ ಎಲ್ಲ ಕಥೆಗಳಲ್ಲಿ ಪಿತೃಹಿಂಸೆ ಸ್ಥಾಯಿಯಾಗಿ ಮಾನವೀಯತೆಯ ಕಾಳಜಿಯ ಸ್ಪರ್ಶವನ್ನೂ ಹೊಂದಿದೆ. ನೈತಿಕ ಬಿಕ್ಕಟ್ಟಿನ ಆಚೆಗಿರುವ ಮಾನವೀಯತೆಯ ಹಂದರವನ್ನು ನೋಡುವ ಸೂಕ್ಷ್ಮತೆಯ ದಾರಿ ಕಥೆಗಳಲ್ಲಿ ಕಂಡು ಬರುತ್ತದೆ ಎಂದರು.  ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್‌. ಹೆಗಡೆ ಕುಂಬ್ರಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರಾದ ಅಶ್ವಿ‌ನ್‌ಕುಮಾರ ಭಟ್ಟ, ಸಹನಾ ಬಾಳ್ಕಲ್‌ ಮಾತನಾಡಿದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ರಂಗಕರ್ಮಿ ಆರ್‌.ಎನ್‌. ಧುಂಡಿ, ಪತ್ರಕರ್ತ ಬಿ.ಎನ್‌. ವಾಸರೆ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಪ್ರಮುಖರಾದ ಆರ್‌.ಆರ್‌. ಭಟ್ಟ, ವಿ.ಎಸ್‌. ಭಟ್ಟ, ಪ್ರಕಾಶ ನಾಯಕ ಇತರರಿದ್ದರು. ಮುಕ್ತಾ ಶಂಕರ ಪ್ರಾರ್ಥಿಸಿದರು. ಸಣ್ಣಪ್ಪ ಭಾಗ್ವ ತ್‌ ನಿರ್ವಹಿಸಿದರು. ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು.

ಅಡಕೆ ವ್ಯವಹಾರಸ್ಥರ ಸಂಘ, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌, ಕನ್ನಡ ಸಾಹಿತ್ಯ ಪರಿಷತ್‌, ರಾಜ್ಯ ಸರ್ಕಾರಿ ನೌಕರರ ಸಂಘ, ಹವ್ಯಕ ಸಂಘ, ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪತ್ರಕರ್ತರ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next