Advertisement

ಉಳ್ಳಾಲ: ತಲಪಾಡಿ ಯುವಕನ ಮೇಲೆ ತಲವಾರು ದಾಳಿ ಯತ್ನ ಸತ್ಯಕ್ಕೆ ದೂರ; ಆಯುಕ್ತ‌ರು ಹೇಳಿದ್ದೇನು?

12:28 PM Aug 03, 2022 | Team Udayavani |

ಉಳ್ಳಾಲ: ತಲಪಾಡಿ ಕೆ. ಸಿ. ರೋಡ್ ಬಳಿ ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬ ತನ್ನ‌ ಮೇಲೆ ಮೂವರು ತಲವಾರು ದಾಳಿ ಯತ್ನ‌ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸಿದಾಗ ಇಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದು ತಿಳಿದು ಬಂದಿದೆ.

Advertisement

ಕೆ.ಸಿ. ರೋಡ್ ಮೂಲದ ಕಿಶೋರ್ ಎಂಬಾತ ತನ್ನ ಹಲ್ಲೆ ಯತ್ನ ಮಾಡಿದ್ದಾರೆಂದು ಆರೋಪಿಸಿದ್ದು, ತಾನು ಕೆಲಸಕ್ಕೆ ತೆರಳುತ್ತಿದ್ದಾಗ ಮೂವರು ತಲವಾರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಸ್ಥಳೀಯವಾಗಿ ಹೇಳಿಕೊಂಡಿದ್ದಾನೆ. ಬಳಿಕ  ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆಯನ್ನು ಬದಲಿಸಿದ್ದು, ತಲವಾರು ದಾಳಿ ಮಾಡಿದ ಹಾಗೆ ಭಾಸವಾಯಿತು ಎಂದು ಹೇಳಿಕೆ ನೀಡುವ ಮೂಲಕ ಹೊಸ ವರಸೆ ಆರಂಭಿಸಿದ್ದಾನೆ. ಪೊಲೀಸರು ಗದರಿಸಿದ ಬಳಿಕ ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಠಾಣೆಯಲ್ಲಿ ಇರಿಸಿದ್ದಾರೆ.

ಇದನ್ನೂ ಓದಿ: ಅಮೃತ ಮಹೋತ್ಸವ ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನ, ದರ್ಗಾಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ

ತಲವಾರು ದಾಳಿಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೊಣಾಜೆ  ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರಲ್ಲಿ ಆತಂಕ‌ ಮೂಡಿದ್ದು, ಬಳಿಕ ಪೊಲೀಸರು ತನಿಖೆ ನಡೆಸಿ ಘಟನೆಗೆ ಕಾರಣಕರ್ತನಾಗಿರುವ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಯುಕ್ತ‌ರ ಸ್ಪಷ್ಟನೆ:

Advertisement

ಈ ಬಗ್ಗೆ ಪೊಲೀಸ್‌ ಆಯುಕ್ತ‌ ಎನ್. ಶಶಿಕುಮಾರ್‌ ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ನಾವು ಆತನನ್ನು ವಿಚಾರಿಸಿದಾಗ, ಯಾರೋ ನನ್ನ ಮೇಲೆ ದಾಳಿ ನಡೆಸಿದಂತೆ ಆಯಿತು ಎಂದಿದ್ದಾನೆ. ಆದರೆ ಯಾರೂ ಕೂಡ ದಾಳಿ ಯತ್ನ ಹಾಗೂ ಬೆನ್ನಟ್ಟಿಲ್ಲ ಎಂಬುವುದನ್ನು ಆತ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next