ಬೆಂಗಳೂರು: ಕಮಿಷನ್ ದಂಧೆ ಆರಂಭ ಮಾಡಿದ್ದೇ ಕಾಂಗ್ರೆಸ್ ನವರು. ಅವರೇ ಬಹುಶಃ ಪ್ರಧಾನಿಗಳಿಗೆ ಪತ್ರ ಬರೆಸಿದ್ದಾರೆ. 20 ಪರ್ಸೆಂಟ್ ಫಲಾನುಭವಿಗಳಿಗೆ ಹೋಗುತ್ತಿತ್ತು. 80 ಪರ್ಸೆಂಟ್ ಏಜೆನ್ಸಿಗಳಿಗೆ ಹೋಗುತ್ತಿತ್ತು. ನಾವು ಬಂದು ಒಳ್ಳೆ ಸಿಸ್ಟಮ್ ಮಾಡಿದ್ದೇವೆ. ಯಾವುದೇ ದಾಖಲೆ ಇಲ್ಲದೆ ಆರೋಪ ಸರಿಯಲ್ಲ. ದೂರಿಗೆ ತಕ್ಕಂತೆ ನಿಖರವಾದ ದಾಖಲೆ ಕೊಡಲಿ, ಸರ್ಕಾರ ಸೂಕ್ತ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕಮಿಷನ್ ದಂಧೆ ಕುರಿತು ಪ್ರಧಾನಿಗಳಿಗೆ ದೂರು ವಿಚಾರವಾಗಿ ಬಿಡಿಎ ಅಧ್ಯಕ್ಷ, ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಬಿಡಿಎ ಮೇಲೆ ಸಾಕಷ್ಟು ಭ್ರಷ್ಟಾಚಾರ ಆರೋಪ ಬಂದಿದೆ. ಸ್ವಚ್ಛ ಬಿಡಿಎ ಮಾಡುತ್ತೇನೆ ಎಂದು ಪ್ರಾರಂಭದಲ್ಲಿ ನಾನು ಹೇಳಿದ್ದೆ, ನಾನು ಬಂದ ಮೇಲೆ ಸಾಕಷ್ಟು ಭ್ರಷ್ಟಾಚಾರಕ್ಕೆ ತಡೆ ಹಾಕಿದ್ದೇನೆ. ಸಾಕಷ್ಟು ಜನರು ಜೈಲಿಗೂ ಹೋಗಿ ಬಂದಿದ್ದಾರೆ. ಕೆಳ ಮಟ್ಟದ ಅಧಿಕಾರಿಗಳು ಲಂಚ ಇಲ್ಲದೇ ಕೆಲಸ ಮಾಡಲ್ಲ ಎಂಬ ದೂರು ಕೇಳಿಬಂದಿದೆ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡುತ್ತಾರೆ. ನಾನೇ ಎಸಿಬಿಗೆ ದೂರು ಕೊಟ್ಟಿದ್ದೇನೆ. ಸಾಕಷ್ಟು ಸಾರ್ವಜನಿಕರು ದೂರು ಕೊಟ್ಟಿದ್ದಾರೆ. ಎಸಿಬಿ ದಾಳಿಯನ್ನು ಸ್ವಾಗತ ಮಾಡುತ್ತೇನೆ ಎಂದರು.
ಈಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ. ಎಸಿಬಿಗೆ ಕೊಡಬೇಕಾದ ಎಲ್ಲ ಸಹಕಾರ ಕೊಡುತ್ತೇವೆ. ನಿನ್ನೆಯ ದಾಳಿಯಲ್ಲಿ ನಗದು ಹಣ ಸಿಕ್ಕಿಲ್ಲ. ನಿನ್ನೆ ಜನ ಬಂದಿದ್ದಾಗ ದಾಳಿ ಆಗಿದೆ. ಬ್ರೋಕರ್ ಗಳು ಇದ್ದಾಗ ದಾಳಿ ನಡೆಯಬೇಕಿತ್ತು. ನಾನೂ ಸಹ ಈ ಬಗ್ಗೆ ಸಿಎಂಗೆ ವಿವರಣೆ ನೀಡಿದ್ದೇನೆ ಎಂದು ಎಸ್ ಆರ್ ವಿಶ್ವನಾಥ್ ಹೇಳಿದರು.
ಇದನ್ನೂ ಓದಿ:ರಾಜಕೀಯದ ಯಶಸ್ಸಿನ ಒತ್ತಡದಲ್ಲಿಯೂ ಭಟ್ಟರ ‘ಗರಡಿ’ ಪ್ರವೇಶಿಸಿದ ಕೌರವ
ಬಿಡಿಎ ಒಂದು ಕಾಲದಲ್ಲಿ ಜನಪರ, ಉತ್ತಮ ಸಂಸ್ಥೆ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರದ ಆರೋಪಗಳು ಕೇಳಿಬರುತ್ತಿವೆ, ಬಿಡಿಎನಲ್ಲಿ ಎಷ್ಟೋ ಕಡತಗಳೇ ಇಲ್ಲ, ಸಿಬ್ಬಂದಿ ಕೂಡ ಕೊರತೆ ಇದೆ. ಹೀಗಾಗಿ ಕೆಲಸ ಹೊರೆ ಹೆಚ್ಚಾಗಿದೆ, ಬಿಡಿಎನಲ್ಲಿ ಈಗ ಬ್ರೋಕರ್ ಗಳ ಕಡಿಮೆ ಆಗಿದ್ದಾರೆ, ಮೊದಲು ಇರುವಷ್ಟು ಈಗ ಯಾರು ಇಲ್ಲ. ಬ್ರೋಕರ್ ಬರದೆ ಇರುವ ಹಾಗೆ ಮಫ್ತಿಯಲ್ಲಿ ನೋಡಿಕೊಳ್ಳಲು ಇಟ್ಟಿದ್ದೇನೆ ಎಂದರು.