Advertisement

Voter ಶತಾಯುಷಿ ಮತದಾರರಿಗೆ ಆಯೋಗದ ಗೌರವ

11:30 PM Nov 25, 2023 | Team Udayavani |

ಬೆಳ್ತಂಗಡಿ: ಚುನಾವಣ ಆಯೋಗ, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಸ್ವೀಪ್‌ ಸಮಿತಿ ವತಿಯಿಂದ 100 ವರ್ಷ ದಾಟಿದ ಮತದಾರರನ್ನು ಆಯ್ಕೆ ಮಾಡಿ ಗೌರವಿ ಸುವ ಪ್ರಕ್ರಿಯೆ ನಡೆಯುತ್ತಿದೆ.

Advertisement

ಕಳೆದ ವಿಧಾನಸಭೆ ಚುನಾವಣೆ ಸಂದರ್ಭ 80 ವರ್ಷ ಮೇಲ್ಪಟ್ಟ, ಅಂಗವಿಕಲ, ಹಾಸಿಗೆ ಹಿಡಿದ ಮತದಾರರಿಗೆ ಮನೆಯಿಂದಲೇ ಮತದಾನದ ಅವಕಾಶವನ್ನು ಆಯೋಗ ಕಲ್ಪಿಸಿತ್ತು. ಇದರಿಂ ದಾಗಿ ಅರ್ಹ ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಭಾಗವಹಿಸುವಂತಾಗಬೇಕು ಎಂಬ ಆಯೋಗದ ಇರಾದೆ ಬಹುತೇಕ ಫಲಪ್ರದ ವಾಗಿತ್ತು. ಇದರ ಮುಂದುವರಿದ ಭಾಗವಾಗಿ ಆಯೋಗವು ಶತಾಯುಷಿ ಮತದಾರರನ್ನು ಗುರುತಿಸಲು ಮುಂದಾಗಿದೆ.

ದ.ಕ. ಜಿಲ್ಲೆಯಲ್ಲಿ 522 ಮಂದಿ ಶತಾಯುಷಿಗಳನ್ನು ಖಾತ್ರಿ ಪಡಿಸಿ ಜಿಲ್ಲಾಡಳಿತ ಮತ್ತು ಜಿ.ಪಂ. ಸಹ ಯೋಗದಲ್ಲಿ ಮನೆಗೆ ತೆರಳಿ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 46 ಮಂದಿ ಶತಾಯುಷಿಗಳನ್ನು ಗುರುತಿಸಿ ಗೌರವಿಸಲಾಗಿದೆ.

ಹಿರಿಯ ನಾಗರಿಕರು ಉತ್ಸಾಹದಿಂದ ಮತದಾನ ದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಯುವ ಮತದಾರರಿಗೆ ಮಾದರಿಯಾಗಿ ಅವರು ಕೂಡ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಶತಾಯುಷಿ ಮತದಾರರಿಗೆ ಚುನಾವಣ ಆಯೋಗ ಮತ್ತು ಜಿಲ್ಲಾಡಳಿತದಿಂದ ಗೌರವ ಸಲ್ಲಿಸಲಾಗುತ್ತಿದೆ.
– ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.
– ಡಾ| ಆನಂದ್‌ ಕೆ., ಸಿಇಒ, ಜಿ.ಪಂ.

ದ.ಕ. ಜಿಲ್ಲೆಯ ಶತಾಯುಷಿಗಳು
- ಮಂಗಳೂರು ಉತ್ತರ- 107
- ಮಂಗಳೂರು ದಕ್ಷಿಣ-176
- ಮಂಗಳೂರು-38
- ಬಂಟ್ವಾಳ- 42
- ಪುತ್ತೂರು-24
- ಬೆಳ್ತಂಗಡಿ-33
- ಮೂಡುಬಿದಿರೆ -69
- ಸುಳ್ಯ-33

Advertisement

 

Advertisement

Udayavani is now on Telegram. Click here to join our channel and stay updated with the latest news.

Next