Advertisement

ರೇಷ್ಮೆ ಬೆಳೆಗಾರರ ಜತೆ ಆಯುಕ್ತೆ ಸಮಾಲೋಚನೆ

06:35 AM Jun 17, 2020 | Lakshmi GovindaRaj |

ಶಿಡ್ಲಘಟ್ಟ: ರೇಷ್ಮೆ ಇಲಾಖೆ ಅಭಿವೃದ್ಧಿ ಆಯುಕ್ತೆ ಶೈಲಜಾ ನಗರದ ರೇಷ್ಮೆಗೂಡಿನ ಮಾರುಕಟ್ಟೆ, ಸ್ವಯಂಚಾಲಿತ ನೂಲು ಬಿಚ್ಚಾಣಿಕಾ ಕೇಂದ್ರ, ರೇಷ್ಮೆ ಹುಳು ಸಾಕಾಣಿಕಾ ಕೇಂದ್ರ, ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ರೇಷ್ಮೆಯ ವಿವಿಧ  ಹಂತಗಳಲ್ಲಿ ತೊಡಗಿಸಿಕೊಂಡವರ ಕುಂದುಕೊರತೆ ಆಲಿಸಿದರು.

Advertisement

ಮೊದಲಿಗೆ ತಾಲೂಕಿನ ಇದ್ಲೂಡು ರಸ್ತೆಯಲ್ಲಿರುವ ಇರ್ಷಾದ್‌ ಅಹಮದ್‌ ಅವರ ಸ್ವಂಚಾಲಿತ ನೂಲು ಬಿಚ್ಚಾಣಿಕಾ ಕೇಂದ್ರ, ಎಸ್‌.ಪಿ.ಎಸ್‌ ಮುನಾವರ್‌ ಅವರ ಮಲ್ಟಿ  ಎಂಡ್‌ ರೀಲಿಂಗ್‌ ಘಟಕ ಹಾಗೂ ಸಾದಿಕ್‌ ಪಾಷ ಅವರ ಸಿಲ್ಕ್ ಫಿಲೇಚರ್‌ ಘಟಕ ವೀಕ್ಷಿಸಿದ ಆಯುಕ್ತರು ನಂತರ ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ರೀಲರ್ ಸಂಘದ ಪ್ರತಿನಿಧಿಗಳು ಆಯುಕ್ತರನ್ನು  ಭೇಟಿ ಮಾಡಿ ರೇಷ್ಮೆ ನೂಲು ಖರೀದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರಲ್ಲದೇ ಪ್ರೋತ್ಸಾಹ ಧನ ನೀಡಬೇಕು, ಬಂಡವಾಳಕ್ಕಾಗಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಕೋರಿದರು. ಇದಕ್ಕೆ ಉತ್ತರಿಸಿದ ಆಯುಕ್ತರು ಈಗಾಗಲೇ ರೇಷ್ಮೆ ಖರೀದಿಗೆ 10 ಕೋಟಿ ರೂ.ಬಿಡುಗಡೆ ಮಾಡಿದ್ದು, ಮತ್ತಷ್ಟು ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೇಷ್ಮೆ ಖರೀದಿಸಲು ಹಣದ ಕೊರತೆಯಾಗುವುದಿಲ್ಲ ಎಂದು  ಸ್ಪಷ್ಟಪಡಿಸಿದರು.

ಜಂಟಿ ನಿರ್ದೇಶಕ ನಾಗ ಭೂಷಣ್‌, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕ ಸುಭಾಷ್‌, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಮ್‌ಕುಮಾರ್‌, ರಾಮಕೃಷ್ಣಪ್ಪ, ಎಸ್‌ ಸಿಒ ಕಾಂತರಾಜು, ರೀಲರ್ ಸಂಘದ ಅಧ್ಯಕ್ಷ ಅನ್ಸರ್‌ ಖಾನ್‌, ರೆಹಮಾನ್‌, ರಾಮಕೃಷ್ಣಪ್ಪ, ರೈತ ಸಂಘ ಹಾಗೂ ಹಸಿರುಸೇನೆ ಮುಖಂಡ ಭಕ್ತರಹಳ್ಳಿ ಪ್ರತೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next