Advertisement
ನಗರದ ಕೊಡಿಯಾಲಬೈಲ್, ಅತ್ತಾವರ ದಲ್ಲಿ ಕೆಲವು ಮಳಿಗೆ-ಅಂಗಡಿಗಳಿಗೆ ದಾಳಿ ನಡೆಸಿದ ತಂಡ ತೆರಿಗೆ ಪಾವತಿ ದಾಖಲೆಗಳನ್ನು ಪರಿಶೀಲಿಸಿ ತೆರಿಗೆ ಪಾವತಿಸದ ಮಾಲಕರಿಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಿದೆ. ವಾರದೊಳಗೆ ತೆರಿಗೆ ಪಾವತಿ ಮಾಡದಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಅತ್ತಾವರದಲ್ಲಿ ಎರಡು ವಸತಿ ಸಮುಚ್ಚಯಗಳಿಗೆ ತೆರಳಿ ಪರಿಶೀಲನೆ ನಡೆಸಿದ ತಂಡ ಆಸ್ತಿತೆರಿಗೆ ಪಾವತಿಸಿದ ಫ್ಲ್ಯಾಟ್‌ಗಳ ಮಾಲಕರಿಗೆ ನೋಟಿಸ್ ಜಾರಿಗೊಳಿಸಿದೆ.
ಆಸ್ತಿತೆರಿಗೆ ಪಾವತಿಸದ, ಉದ್ದಿಮೆ ಪರವಾನಿಗೆ ನವೀಕರಿಸದ ವಾಣಿಜ್ಯ ಮಳಿಗೆಗಳಿಗೆ, ಅಂಗಡಿಗಳಿಗೆ ಹಾಗೂ ವಸತಿಸಮುಚ್ಚಯಗಳಿಗೆ ಪಾಲಿಕೆಯಿಂದ ದಾಳಿ ನಿರಂತರ ಮುಂದುವರಿಯಲಿದೆ. ವಾರದಲ್ಲಿ ಒಂದು ದಿನ ನಿಗದಿ ಪಡಿಸಿ ಕಾರ್ಯಾಚರಣೆ ನಡೆಸಲಾಗುವುದು. ಪಾಲಿಕೆಗೆ 25 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಇದೆ. ಸಾಕಷ್ಟು ಬಾರಿ ನೋಟಿಸ್ ನೀಡಿದ್ದರೂ ಕೆಲವರು ಪಾವತಿಸಿಲ್ಲ. ತೆರಿಗೆ ಪಾವತಿಸದೆ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಈಗ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದೆ. ಇದಕ್ಕೂ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಮ್ಮದ್ ನಜೀರ್ ತಿಳಿಸಿದ್ದಾರೆ. ಕಾನೂನು ಪ್ರಕಾರ ಆಸ್ತಿ ತೆರಿಗೆ ಸಹಿತ ಎಲ್ಲ ರೀತಿಯ ತೆರಿಗೆ ಮತ್ತು ನೀರಿನ ಬಿಲ್ ಸಕಾಲದಲ್ಲಿ ಪಾಲಿಕೆಗೆ ಪಾವತಿಸಬೇಕು ಎಂದವರು ಕೋರಿದ್ದಾರೆ. ಕಂದಾಯ ಅಧಿಕಾರಿ ಗಾಯತ್ರಿ ನಾಯಕ್, ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.