Advertisement

Hebri; “ಪೆರ್ಡೂರಿನ ಬಂಟರು’ ಸ್ಮರಣ ಸಂಚಿಕೆ ಬಿಡುಗಡೆ

11:09 PM Feb 12, 2024 | Team Udayavani |

ಹೆಬ್ರಿ: ಆತಿಥ್ಯ ಹಾಗೂ ಸಮಾಜಮುಖಿ ಚಟುವಟಿಕೆಯಲ್ಲಿ ರಾಜ್ಯದ ಗಮನ ಸೆಳೆದ ಪೆರ್ಡೂರು ಬಂಟರ ಸಂಘ ಅತ್ಯಾಕರ್ಷಕ ಸಮುದಾಯ ಭವನ ನಿರ್ಮಾಣ ಮಾಡುವುದರ ಜತೆಗೆ ಪೆರ್ಡೂರಿನ ಬಂಟರ ಮಾಹಿತಿಯುಳ್ಳ ಸಂಚಿಕೆಯನ್ನು ಬಿಡುಗಡೆ ಮಾಡಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋರ್‌ ಆಳ್ವ ಹೇಳಿದರು.

Advertisement

ಅವರು ರವಿವಾರ ಬಂಟರ ಸಂಘ ಪೆರ್ಡೂರು ಮಂಡಲದಿಂದ ನಿರ್ಮಾಣಗೊಂಡ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದ ಉದ್ಘಾಟನೆ ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು ಸಂಪಾದಕತ್ವದ “ಪೆರ್ಡೂರಿನ ಬಂಟರು’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ. ಶಾಂತಾರಾಮ ಸೂಡ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು, ಕೋಶಾಧಿಕಾರಿ ಪ್ರಮೋದ್‌ ರೈ ಪಳಜೆ, ಉಪಾಧ್ಯಕ್ಷರಾದ ಸತೀಶ್‌ ಶೆಟ್ಟಿ ಕುತ್ಯಾರುಬೀಡು, ಮಹೇಶ್‌ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ, ಸುರೇಶ್‌ ಹೆಗ್ಡೆ, ಪ್ರಕಾಶ್‌ ಶೆಟ್ಟಿ, ದಿನೇಶ್ಚಂದ್ರ ಶೆಟ್ಟಿ, ರಾಜ್‌ಕುಮಾರ್‌ ಶೆಟ್ಟಿ, ಶಿವರಾಮ ಶೆಟ್ಟಿ, ಸರಳ ಎಸ್‌. ಹೆಗ್ಡೆ, ಭಾರತಿ ಶ್ರೀಧರ್‌ ಶೆಟ್ಟಿ, ಪ್ರೇಮಲತಾ ಎಸ್‌. ಹೆಗ್ಡೆ ಮೊದಲಾದವರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next