Advertisement

20 ದಿನ ನಿಯೋವೈಸ್‌ ಧೂಮಕೇತುವಿನ ದರ್ಶನ : ಖಗೋಳಾಸಕ್ತರಿಗೆ ನಾಳೆಯಿಂದ ಹಬ್ಬ

11:29 AM Jul 13, 2020 | sudhir |

ಭಾರತದ ಖಗೋಳಾಸಕ್ತರಿಗೆ ಮುಂದಿನ ಕೆಲವು ದಿನಗಳು ಕಣ್ಣಿಗೆ ಹಬ್ಬ. ಏಕೆಂದರೆ ಇದೇ ಮಂಗಳವಾರದಿಂದ 20 ದಿನಗಳ ಕಾಲ ನಿಯೋವೈಸ್‌ ಧೂಮಕೇತುವನ್ನು (ಸಿ/2020 ಎಫ್3) ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಪ್ರತಿ ದಿನ ಸುಮಾರು 20 ನಿಮಿಷಗಳ ಕಾಲ ಈ ಅದ್ಭುತ ಆಕಾಶಕಾಯವು ಗೋಚರಿಸಲಿದ್ದು, ಬರಿಗಣ್ಣಿನಿಂದಲೇ ಇದನ್ನು ವೀಕ್ಷಿಸಲು ಸಾಧ್ಯವಿದೆ.

Advertisement

ಭಾರತದಲ್ಲಿ ಗೋಚರ
ಆಗಸದ ವಾಯವ್ಯ ಭಾಗದಲ್ಲಿ ಜು.14ರಿಂದ ಮುಂದಿನ 20 ದಿನಗಳವರೆಗೆ ಇದು ಗೋಚರಿಸಲಿದೆ. ಸೂರ್ಯಾಸ್ತವಾದ ಬಳಿಕ ಸುಮಾರು 20 ನಿಮಿಷಗಳ ಕಾಲ ಇದು ಕಾಣಿಸಲಿದ್ದು, ಬರಿಗಣ್ಣಿನಿಂದಲೇ ವೀಕ್ಷಿಸಬಹುದು. ಜುಲೈ 22-23ರಂದು ಭೂಮಿಯ ಅತ್ಯಂತ ಸಮೀಪಕ್ಕೆ ಧೂಮಕೇತು ಬರಲಿದೆ ಎಂದು ಒಡಿಶಾ ಪ್ಲಾನೆಟೋರಿಯಂನ ಉಪ ನಿರ್ದೇಶಕ
ಡಾ| ಸುಭೇಂದು ಪಾಟ್ನಾಯಕ್‌ ಹೇಳಿದ್ದಾರೆ.

ಪತ್ತೆಯಾಗಿದ್ದು ಯಾವಾಗ?
ನಾಸಾದ ನಿಯೋವೈಸ್‌(ನಿಯರ್‌ ಅರ್ಥ್ ವೈಡ್‌- ಫೀಲ್ಡ್‌ ಇನ್‌ಫ್ರಾರೆಡ್‌ ಸರ್ವೇ ಎಕ್ಸ್‌ಪ್ಲೋರರ್‌) ಟೆಲಿಸ್ಕೋಪ್‌ ಕಳೆದ ಮಾರ್ಚ್‌ 27ರಂದು ಈ ಧೂಮಕೇತುವನ್ನು ಪತ್ತೆಹಚ್ಚಿತ್ತು.

ಆಗಸ್ಟ್‌ನಲ್ಲಿ ಕಣ್ಮರೆ
ಆಗಸ್ಟ್‌ ತಿಂಗಳು ಸಮೀಪಿಸಿದಂತೆ ಧೂಮಕೇತು ಕಣ್ಮರೆಯಾಗಲಿದ್ದು, ಅನಂತರ ಅದು ಬರಿಗಣ್ಣಿಗೆ ಕಾಣ ಸಿಗುವುದಿಲ್ಲ. ಬೈನಾಕ್ಯುಲರ್‌ ಅಥವಾ ದೂರದರ್ಶಕದ ಮೂಲಕ ಇದು ಸ್ವಲ್ಪಮಟ್ಟಿಗೆ ಗೋಚರಿಸಬಹುದು.

ಈಗ ಎಲ್ಲಿದೆ?
ಪ್ರಸ್ತುತ ಈ ಧೂಮಕೇತು ಭೂಮಿಯಿಂದ 20 ಕೋಟಿ ಕಿ.ಮೀ. ದೂರದಲ್ಲಿ ಪರಿಭ್ರಮಿ ಸುತ್ತಿದೆ. ಜು.22ರಂದು ಅದು ಭೂಮಿಯ ಸಮೀಪಕ್ಕೆ ಅಂದರೆ 10.30 ಕೋಟಿ ಕಿ.ಮೀ.ಗಳ ಹತ್ತಿರಕ್ಕೆ ಆಗಮಿಸಲಿದ್ದು, ಆಗ ಅದು ಸ್ಪಷ್ಟವಾಗಿ ಗೋಚರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next