Advertisement

ತೀವ್ರ ಅನಾರೋಗ್ಯದಿಂದ ಜನಪ್ರಿಯ ಹಾಸ್ಯನಟ ವಡಿವೇಲ್ ಬಾಲಾಜಿ ನಿಧನ

06:02 PM Sep 10, 2020 | Mithun PG |

ಚೆನ್ನೈ: ತಮಿಳಿನ ಜನಪ್ರಿಯ ಹಾಸ್ಯ ನಟ ವಡಿವೇಲ್ ಬಾಲಾಜಿ ಹೃದಯಘಾತವಾಗಿ ಇಂದು ನಿಧನರಾಗಿದ್ದಾರೆಂದು ಮಾಧ್ಯಮ ಮೂಲಗಳು ವರದಿ ಮಾಡಿದೆ.

Advertisement

ವಡಿವೇಲ್ ಬಾಲಾಜಿ(45) ಸಿನಿಮಾ ಸೇರಿದಂತೆ, ಕಿರುತೆರೆಯಲ್ಲೂ ಬಣ್ಣಹಚ್ಚಿ ಜನಪ್ರಿಯರಾಗಿದ್ದರು. ಆದರೇ ತೀವ್ರ ಅನಾರೋಗ್ಯದಿಂದ ಕಳೆದ 15 ದಿನಗಳ ಹಿಂದೆ ಚೆನ್ನೈನ ಸರ್ಕಾರಿ ಹಾಸ್ಪತ್ರೆಗೆ ದಾಖಲಾಗಿದ್ದು ಇಂದು ಚಿಕಿತ್ಸೆ ಫಲಿಸದೇ ವಿಧಿವಶವಾಗಿದ್ದಾರೆಂದು ತಿಳಿದುಬಂದಿದೆ.

ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಅದು ಇದು ಎದು” ಕಾರ್ಯಕ್ರಮದ ಮೂಲಕ ಹಾಸ್ಯಗಾರರಾಗಿ ಮಿಂಚು ಹರಿಸಿದ್ದರು. ಮಾತ್ರವಲ್ಲದೆ ಕೆಲವೊಂದು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದರು. ತಮಿಳಿನಿ ಪ್ರಸಿದ್ದ ಕಾಮಿಡಿಯನ್ ವಡಿವೇಲ್ ಮಾದರಿಯಲ್ಲಿ ಆಂಗಿಕ ಅಭಿನಯ ತೋರಿಸುತ್ತಿದ್ದರಿಂದ ಇವರನ್ನು ವಡಿವೇಲ್ ಬಾಲಾಜಿ ಎಂದೇ ಕರೆಯಲಾಗುತ್ತಿತ್ತು. ಇವರ ಅಭಿನಯವನ್ನು ಮೆಚ್ಚಿ ಸ್ವತಃ ವಡಿವೇಲ್ ಅವರೇ ಪ್ರಶಂಸೆ ವ್ಯಕ್ತಪಡಿಸಿದ್ದರು.

1975ರಲ್ಲಿ ಜನಿಸಿದ್ದ ವಡಿವೇಲ್ ಬಾಲಾಜಿ ವಿಜಯ್ ಟಿವಿ ಕಾರ್ಯಕ್ರಮದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಮಿಮಿಕ್ರಿಯಲ್ಲೂ ಚತುರರಾಗಿದ್ದ ಇವರು ನಯನತಾರ ಮುಖ್ಯಭೂಮಿಕೆಯಲ್ಲಿದ್ದ “ಕೊಲಮಾವು ಕೋಕಿಲ” ಸಿನಿಮಾದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next