Advertisement

ಕಾಮೆಡ್‌-ಕೆ ಫಲಿತಾಂಶ ಪ್ರಕಟ

11:09 PM Sep 03, 2020 | mahesh |

ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿರುವ ಎಂಜಿನಿಯರಿಂಗ್‌ ಸೀಟುಗಳ ಭರ್ತಿಗೆ ನಡೆದ ಕಾಮೆಡ್‌-ಕೆ ಪ್ರವೇಶ ಪರೀಕ್ಷೆಯ ಫ‌ಲಿತಾಂಶ ಗುರುವಾರ ಪ್ರಕಟವಾಗಿದೆ. ಸಿಇಟಿಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ರ್‍ಯಾಂಕ್‌ ಪಡೆದಿದ್ದ ಬೆಂಗಳೂರಿನ ಎಂ. ರಕ್ಷಿತ್‌ 180ಕ್ಕೆ 168 ಅಂಕ ಪಡೆದು ಇಲ್ಲೂ ಪ್ರಥಮ ರ್‍ಯಾಂಕ್‌ ಗಳಿಸಿಕೊಂಡಿದ್ದಾರೆ.

Advertisement

ರಾಜಸ್ಥಾನದ ಸೌರವ್‌ ಕುಮಾರ್‌ ಮತ್ತು ಬಿಹಾರ್‌ನ ಅನುಪಮಾ ಸಿನ್ಹ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ರ್‍ಯಾಂಕ್‌ ಗಳಿಸಿದ್ದಾರೆ. ಟಾಪ್‌ ಹತ್ತರಲ್ಲಿ 1 ಮತ್ತು 7ನೇ ರ್‍ಯಾಂಕ್‌ (ಶಾದನ್‌ ಹುಸೇನ್‌-7ನೇ ರ್‍ಯಾಂಕ್‌ ) ಪಡೆದವರು ಕರ್ನಾಟಕದವರಾಗಿದ್ದಾರೆ.

ಮೊದಲ 100 ರ್‍ಯಾಂಕ್‌ಗಳ ಪೈಕಿ 45 ರ್‍ಯಾಂಕ್‌ಗಳು ಕರ್ನಾಟಕದ ಪಾಲಾಗಿವೆ. ರ್‍ಯಾಂಕ್‌ ಕಾರ್ಡ್‌ ಅನ್ನು www.comedk.org ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next