ನವದೆಹಲಿ: ಮಾದಕ ವಸ್ತು ಸಂಗ್ರಹ ಮತ್ತು ಸೇವನೆ ಆರೋಪದ ಮೇಲೆ ಬಂಧಿತರಾಗಿರುವ ಹಾಸ್ಯನಟಿ ಭಾರ್ತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಡಿಸೆಂಬರ್ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ನ್ಯಾಯಾಲಯ ಆದೇಶ ನೀಡಿದೆ.
ಶನಿವಾರ(ನ.21) ಎನ್ ಸಿಬಿ ಅಧಿಕಾರಿಗಳು ಮಹಾರಾಷ್ಟ್ರದ ಅಂಧೇರಿಯಲ್ಲಿ ಭಾರ್ತಿ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿ ಅಲ್ಪ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಭಾರ್ತಿ ಸಿಂಗ್ ಹಾಗೂ ಆಕೆಯ ಪತಿ ಲಿಂಬಾಲಿಯಾ ಡ್ರಗ್ಸ್ ಸೇವಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದರು.
ಎನ್ ಸಿಬಿ ಅಧಿಕಾರಿಗಳು ಶನಿವಾರ ಭಾರ್ತಿ ಸಿಂಗ್ ರನ್ನು ಹಾಗೂ ಸತತ 12 ಗಂಟೆಗಳ ವಿಚಾರಣೆ ನಡೆಸಿ ಭಾನುವಾರ (ನ.22) ಆಕೆಯ ಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಮುಂಬೈನ ನ್ಯಾಯಾಲಯ ಡಿಸೆಂಬರ್ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸಿಸಿಬಿ ಅಧಿಕಾರಿ ಸೋಗಿನಲ್ಲಿ ಉದ್ಯಮಿಯ ಬ್ಲ್ಯಾಕ್ ಮೆಲ್! ಪೊಲೀಸರಿಂದ ನಕಲಿ ಅಧಿಕಾರಿಯ ಬಂಧನ
ಏತನ್ಮಧ್ಯೆ ದಂಪತಿಗಳಿಬ್ಬರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ಸೋಮವಾರ (ನ. 23) ನಡೆಯಲಿದೆ.
ಶನಿವಾರ ಭಾರ್ತಿ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಎನ್ ಸಿ ಬಿ ಅಧಿಕಾರಿಗಳು 86.5 ಗ್ರಾಂ ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ಮೂತ್ರಪಿಂಡ ವೈಫಲ್ಯದಿಂದ ಕಿರುತೆರೆ ನಟಿ ಲೀನಾ ಆಚಾರ್ಯ ನಿಧನ