Advertisement

Infosys: ತಿಂಗಳಿಗೆ 10 ದಿನ ಕಚೇರಿಗೆ ಬನ್ನಿ: ಇನ್ಫೋಸಿಸ್‌

11:17 AM Nov 02, 2023 | Team Udayavani |

ನವದೆಹಲಿ: ಭಾರತದ ಎರಡನೇ ಅತಿದೊಡ್ಡ ಸಾಫ್ಟ್ವೇರ್‌ ಸೇವೆ ಪೂರೈಕೆದಾರ ಸಂಸ್ಥೆ ಇನ್ಫೋಸಿಸ್‌ ಲಿ. ತನ್ನ ಉದ್ಯೋಗಿಗಳಿಗೆ ತಿಂಗಳಿಗೆ 10 ದಿನಗಳು ಕಚೇರಿಗೆ ಆಗಮಿಸುವಂತೆ ಸೂಚಿಸಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಕಂಪನಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಉದ್ಯೋಗಿಗಳಿಗೆ ತಲುಪಿರುವ ಇ-ಮೇಲ್‌ ಮಾಹಿತಿ ಪ್ರಕಾರ ನ.20ರಿಂದ ಹೊಸ ನಿಯಮ ಅನ್ವಯವಾಗಲಿದೆ.

Advertisement

ಕೊರೊನಾ ಸಮಯ ಹಾಗೂ ನಂತರದ ದಿನಗಳಲ್ಲಿ ಅನೇಕ ಐಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಹೇಳಿದ್ದವು. ಸದ್ಯ ಪರಿಸ್ಥಿತಿ ಯಥಾ ಸ್ಥಿತಿಗೆ ಮರಳುತ್ತಿರುವುದರಿಂದ ಪುನಃ ಕಂಪನಿಗಳು ಹೈಬ್ರಿಡ್‌ ಮಾದರಿಯಲ್ಲಿ ವಾರಕ್ಕೆ ಕೆಲವು ದಿನಗಳು ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ನಿರ್ದೇಶಿಸಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(ಟಿಸಿಎಸ್‌) ವಾರಕ್ಕೆ ಐದೂ ದಿನಗಳು ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಈಗಾಗಲೇ ಸೂಚಿಸಿದೆ.

ಅಮೆಜಾನ್‌.ಕಾಮ್‌ ಮತ್ತು ಅಲ್ಫಾಬೆಟ್‌ ಇನ್ಕ್ಸ್‌ ಗೂಗಲ್‌ ಕಂಪನಿಗಳು ವಾರಕ್ಕೆ ಕೆಲವು ದಿನಗಳು ಕಚೇರಿಗೆ ಆಗಮಿಸುವಂತೆ ತನ್ನ ಉದ್ಯೋಗಿಗಳಿಗೆ ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next