Advertisement
ಮಲೆನಾಡು ಪ್ರಾಕೃತಿಕ ಸೌಂದರ್ಯದಷ್ಟೇ ಅಡುಗೆಗೂ ಹೆಸರುವಾಸಿ. ಮಲೆನಾಡಿನ ಜನರು ಬಗೆ ಬಗೆಯ ಸೊಪ್ಪು, ತರಕಾರಿಯಿಂದ ರುಚಿಕರ ಖಾದ್ಯಗಳನ್ನು ತಯಾರಿಸುತ್ತಾರೆ. ಅದು ಆರೋಗ್ಯ ರಕ್ಷಣೆಯ ಜೊತೆಗೆ ಬಾಯಿಗೂ ರುಚಿ ನೀಡುತ್ತದೆ. ಮಲೆನಾಡಿಗರ ತಿನಿಸುಗಳಿಂದಲೇ ಹೆಸರು ಮಾಡಿರುವ ಹೋಟೆಲೆಂದು ಶಿರಸಿಯಲ್ಲಿದೆ.
Related Articles
ಮೀನಾಕ್ಷಿ ಭವನದ ವಿಶೇಷ ತಿಂಡಿ ಎಂದರೆ ಕೊಟ್ಟೆ ಕಡುಬು, ಬೆಣ್ಣೆ ದೋಸೆ. ಇದರ ಜೊತೆಗೆ ತಟ್ಟೆ ಇಡ್ಲಿ, ವಿವಿಧ ಬಗೆಯ ದೋಸೆ, ರೈಸ್‌ಬಾತ್, ಕರಾವಳಿ ಭಾಗದ ತಿಂಡಿ ಜೊತೆಗೆ ದಕ್ಷಿಣ ಭಾರತ ಶೈಲಿಯ ಊಟವೂ ಇಲ್ಲಿ ಸಿಗುತ್ತದೆ. ಇನ್ನು ಇಡ್ಲಿ, ದೋಸೆ ಜೊತೆಗೆ ಕೊಡುವ ತೆಂಗಿನಕಾಯಿ ಚಟ್ನಿ, ತರಕಾರಿ ಪಲ್ಯ ರುಚಿಯಾಗಿರುತ್ತದೆ. ಹೊಸ ಕಟ್ಟಡ ನಿರ್ಮಾಣದ ನಂತರ ಹಿಂದಿನ ತಿಂಡಿಗಳ ಜೊತೆಗೆ ಚಾಟ್ಸ್ ಮುಂತಾದ ಬಗೆಯ ತಿಂಡಿಗಳನ್ನೂ ಉಣಬಡಿಸುತ್ತೇವೆ ಎನ್ನುತ್ತಾರೆ ಹೋಟೆಲ್ ಮಾಲಿಕರಲ್ಲಿ ಒಬ್ಬರಾದ ವಿಶ್ವನಾಥ್.
ಮೀನಾಕ್ಷಿ ಭವನ ವಾರದ 7 ದಿನವೂ ತೆರೆದಿರುತ್ತದೆ. ಭಾನುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರವರೆಗೆ ಹಾಗೂ ಉಳಿದ ದಿನಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 9.30 ಗಂಟೆಯವರೆಗೂ ಸೇವೆಯನ್ನು ಒದಗಿಸುತ್ತದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ವೇಳೆ ಜೋಳದ ರೊಟ್ಟಿ, ಚಪಾತಿ ಊಟದ ವ್ಯವಸ್ಥೆ ಇರುತ್ತದೆ.
Advertisement
– ಭೋಗೇಶ ಎಂ.ಆರ್.