Advertisement

Havyaka Sammelana: ಮೂರು ಮಕ್ಕಳ ಹೊಂದಿ, ಹೆಚ್ಚಾದರೆ ಮಠಕ್ಕೆ ಕೊಡಿ: ಸ್ವರ್ಣವಲ್ಲಿ ಶ್ರೀ

02:35 AM Dec 30, 2024 | Team Udayavani |

ಬೆಂಗಳೂರು: ಹವ್ಯಕ ಬ್ರಾಹ್ಮಣರು ಬ್ರಾಹ್ಮಣರಾಗಿಯೇ ಉಳಿಯಬೇಕು. ಜತೆಗೆ ಹವ್ಯಕ ಸಮುದಾಯದ ಉಳಿವಿಗಾಗಿ ಸೂಕ್ತ ವಯಸ್ಸಿಗೆ ಶಾಸ್ತ್ರೋಕ್ತ ವಿವಾಹ ಹಾಗೂ ಗೀತ ಪಾರಾಯಣ ಸೂತ್ರವನ್ನು ಎಲ್ಲರೂ ಪಾಲಿಸಬೇಕು ಎಂದು ಸೋಂದ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

Advertisement

ಅರಮನೆ ಮೈದಾನದಲ್ಲಿ ರವಿವಾರ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಹಸ್ರಚಂದ್ರ ಸಭೆಯಲ್ಲಿ ಅವರು ಮಾತನಾಡಿ, ನೈತಿಕತೆಯ ಪತನ, ಜನಸಂಖ್ಯೆಯ ಕ್ಷೀಣತೆಯ ಜ್ವಲಂತ ಸಮಸ್ಯೆ ಎದುರಿಸುತ್ತಿರುವ ಹವ್ಯಕ ಸಮಾಜದ ಉಳಿವಿಗೆ ಸೂಕ್ತ ವಯಸ್ಸಿಗೆ ಶಾಸ್ತ್ರೋಕ್ತ ವಿವಾಹ ಹಾಗೂ ಗೀತ ಪಾರಾಯಣದಿಂದ ಮಾತ್ರ ಸಾಧ್ಯ ಎಂದರು.

ಬಹುತೇಕರು ಅವರ ಸಂತತಿಯನ್ನು ನಿಯಂತ್ರಣ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಮಠದಲ್ಲಿ ದಂಪತಿಗಳಿಗೆ ಮಾರ್ಗದರ್ಶನ ಶಿಬಿರಗಳನ್ನು ನಡೆಸಲಾಗುತ್ತದೆ. ಪ್ರತಿ ದಂಪತಿಗೆ ಕನಿಷ್ಠ ಮೂರು ಮಕ್ಕಳು ಇರಬೇಕು. ಇನ್ನೂ ಹೆಚ್ಚಾದರೆ ಮಠಕ್ಕೆ ಕೊಡಿ. ನಾವು ಸಾಕುತ್ತೇವೆ ಎಂದು ಒತ್ತಿ ಹೇಳಿದರು. ಇಷ್ಟೇ ಅಲ್ಲದೆ, ದಾರಿ ತಪ್ಪಿದ ಹೆಣ್ಣು ಮಕ್ಕಳನ್ನು ಸಂರಕ್ಷಿಸುವ ಕೆಲಸವನ್ನು ಶ್ರೀ ಮಠದ ಜಾಗೃತ ಕೇಂದ್ರದಿಂದ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ 24 ಹೆಣ್ಣು ಮಕ್ಕಳನ್ನು ರಕ್ಷಿಸಿ, ಮನಃಪರಿವರ್ತನೆ ಮಾಡಲಾಗಿದೆ. ಈಗ ಅವರು ಸುಖ ಜೀವನ ನಡೆಸುತ್ತಿದ್ದಾರೆ ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.

ಇದೇ ವೇಳೆ ಮಾತನಾಡಿದ ಸ್ವರ್ಣವಲ್ಲಿ ಮಠದ ಕಿರಿಯ ಶ್ರೀಗಳಾದ ಶ್ರೀಆನಂದಭೋದೇಂದ್ರ ಸರಸ್ವತಿ ಸ್ವಾಮೀಜಿ, ಹಳ್ಳಿ ಜೀವನ ಶ್ರೇಷ್ಠ ಜೀವನ ಎಂದು ತೋರಿಸಿದವರೇ ಹವ್ಯಕರು. ಆದರೆ, ಇಂದು ಹಳ್ಳಿಯಿಂದ ಪಟ್ಟಣದತ್ತ ವಲಸೆ ಹೆಚ್ಚಾಗುತ್ತಿದೆ. ನಮ್ಮ ಧರ್ಮದ ರಕ್ಷಣೆಯ ಜತೆಗೆ ಕೃಷಿ ಪದ್ಧತಿ, ಹಳ್ಳಿಗಳನ್ನು ಉಳಿಸುವತ್ತ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next