ಮುಂಬೈ: 2023 ರಿಂದ 2027 ರ ಅವಧಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಧ್ಯಮ ಹಕ್ಕುಗಳ ಇ-ಹರಾಜು ಭಾನುವಾರ ಪ್ರಾರಂಭವಾಗಿದೆ. ಟಿವಿ ಮತ್ತು ಡಿಜಿಟಲ್ ರೈಟ್‌ನ ಸಂಯೋಜಿತ ಬಿಡ್ 40,000 ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಮೂಲಗಳು ತಿಳಿಸಿವೆ.
ಕೊನೆಯ ಎರಡು ವರ್ಷಗಳಲ್ಲಿ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಹೆಚ್ಚಿಸುವ ಷರತ್ತಿನೊಂದಿಗೆ 2023-2027 ರಿಂದ ಐದು ವರ್ಷಗಳ ಅವಧಿಗೆ ಈ ಬಿಡ್ಡಿಂಗ್ ಮಾಡಲಾಗುತ್ತಿದೆ.
ಪ್ರಕ್ರಿಯೆಯನ್ನು ಒಟ್ಟು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ (ಎ, ಬಿ, ಸಿ ಮತ್ತು ಡಿ). ಪ್ಯಾಕೇಜ್ ಎ ಭಾರತೀಯ ಉಪಖಂಡಕ್ಕೆ ಟಿವಿಗೆ ಪ್ರತ್ಯೇಕವಾಗಿದೆ. ಪ್ಯಾಕೇಜ್ ಬಿ ಭಾರತ ಉಪಖಂಡಕ್ಕೆ ಡಿಜಿಟಲ್ ರೈಟ್ಸ್ ಗೆ ವಿಂಗಡಿಸಲಾಗಿದೆ. ಪ್ಯಾಕೇಜ್ ಸಿ ಯಲ್ಲಿ ಆಯ್ದ ಪ್ರತಿ ಕೂಟದ ಆಯ್ದ ಪಂದ್ಯಗಳಿಗೆ ಮತ್ತು ಸಾಗರೋತ್ತರ ಮಾರುಕಟ್ಟೆಗೆ ಟಿವಿ ಮತ್ತು ಡಿಜಿಟಲ್ ಸೇರಿ ಡಿ ಪ್ಯಾಕೇಜ್ ಮಾಡಲಾಗಿದೆ.
ಇದನ್ನೂ ಓದಿ:‘ಯೂ ಆರ್ ಮೈ ಹೀರೋ’: ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಸಂಹಿತಾ ವಿನ್ಯಾ ನಾಯಕಿ
ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹಕ್ಕುಗಳ ಹರಾಜು ರೇಸ್‌ನಿಂದ ಅಮೆಜಾನ್ ಹಿಂದೆ ಸರಿದಿದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 2017 ರಲ್ಲಿ 1634 7.50 ಕೋಟಿ ರೂಪಾಯಿಗಳ ಬಿಡ್‌ನೊಂದಿಗೆ 2017-2022 ಅವಧಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಪಡೆದಿತ್ತು.