Advertisement

ಕಲರ್‌ ಫ‌ುಲ್‌ ಟೂಟಿಫ್ರೂಟಿ  ಮಾಡಿ ನೋಡಿ

02:08 PM Sep 22, 2018 | |

ಬಣ್ಣಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ನಾವು ಧರಿಸೋ ಬಟ್ಟೆಗಳಷ್ಟೇ ಅಲ್ಲ ತಿನ್ನುವ ಆಹಾರವೂ ಬಣ್ಣ ಬಣ್ಣದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತುಗಳನ್ನೂ ಮಾಡುತ್ತಾರೆ. ಐಸ್‌ ಕ್ರೀಮ್‌ ಗಳು ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ.

Advertisement

ನೋಡಲು ಸೊಗಸಾಗಿರುವ ಐಸ್‌ ಕ್ರೀಮ್‌ಗಳಲ್ಲಿ ಕಲರ್‌ ಫ‌ುಲ್‌ ಟೂಟಿ ಫ್ರೂಟಿ ಎಲ್ಲರಿಗೂ ಇಷ್ಟವೇ. ಹಲವು ಫ್ಲೇವರ್‌ ಗಳೊಂದಿಗೆ ಐಸ್‌ ಕ್ರೀಮ್‌ನ ಸ್ವಾದ ಹೆಚ್ಚಿಸುವ ಈ ಟೂಟಿಫ್ರೂಟಿಯನ್ನು ಹಣಕೊಟ್ಟು ಹೊರಗಿನಿಂದಲೇ ತರಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು. ಮಕ್ಕಳು ಇಷ್ಟಪಡುವ ಬಣ್ಣ, ಫ್ಲೇವರ್‌ ನಲ್ಲಿ ಮಾಡಿಕೊಡಬಹುದು. ಯಾವುದೇ ರಾಸಾಯನಿಕವಿಲ್ಲದೆ ಆರೋಗ್ಯಕರ ಟೂಟಿ ಫ್ರೂಟಿಮಾಡುವುದು ಬಲು ಸುಲಭ.

ಇದಕ್ಕೆ ಒಂದು ಸಾಮಾನ್ಯ ಗಾತ್ರದ ಎರಡು ಕಪ್‌ ನಷ್ಟು ಹಸಿ ಪಪ್ಪಾಯಿ ತೆಗೆದಿರಿಸಿ. ಪಪ್ಪಾಯಿಯ ಸಿಪ್ಪೆ, ಬೀಜಗಳನ್ನು ತೆಗೆದು ಸಣ್ಣದಾಗಿ ಅಂದರೆ ಟೂಟಿಫ್ರೂಟಿ ಗಾತ್ರಕ್ಕೆ ಹೆಚ್ಚಿಕೊಳ್ಳಿ. ಅನಂತರ ನೀರನ್ನು ಚೆನ್ನಾಗಿ ಕುದಿಸಿ ಎರಡು ಕಪ್‌ ಪಪ್ಪಾಯಿ ಪೀಸ್‌ಗೆ ನಾಲ್ಕು ಕಪ್‌ನಷ್ಟು ಹಾಕಿ ಅರೆ ಬೇಯಿಸಬೇಕು. ಗಮನವಿರಲಿ- ಇದು ಪೂರ್ತಿ ಬೇಯಬಾರದು. ಅನಂತರ ನೀರಿನಿಂದ ಪಪ್ಪಾಯವನ್ನು ಬೇರ್ಪಡಿಸಿ ಬೇರೊಂದು ಪಾತ್ರೆಗೆ ಹಾಕಿ. ಒಂದು ಪಾತ್ರೆಗೆ 250 ಗ್ರಾಂ ನಷ್ಟು ಸಕ್ಕರೆಯನ್ನು ಹಾಕಿ ಒಂದು ಕಪ್‌ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಸಕ್ಕರೆ ಸಂಪೂರ್ಣ ಕರಗಿ ಪಾಕದ ರೀತಿ ಆಗುವಾಗ ಬೇಯಿಸಿದ ಪಪ್ಪಾಯವನ್ನು ಹಾಕಿ. ಸುಮಾರು 15 ನಿಮಿಷ ಇದರಲ್ಲಿ ಬೇಯಲಿ. ಸಕ್ಕರೆ ಅಂಶವನ್ನು ಪಪ್ಪಾಯ ಸಂಪೂರ್ಣ ಹೀರಿ ಕೊಳ್ಳಬೇಕು.

ಬಳಿಕ ಒಲೆಯಿಂದ ಕೆಳಗಿರಿಸಿ ಆರಲು ಬಿಡಿ. ಸುಮಾರು ಅರ್ಧ ಗಂಟೆ ಬಳಿಕ ಪಪ್ಪಾಯ ಪಾಕದಿಂದ ತೆಗೆದು ಬಣ್ಣಕ್ಕನುಗುಣವಾಗಿ ವಿಂಗಡಿಸಿಕೊಳ್ಳಿ. ಮನೆಯಲ್ಲೇ ತಯಾರಿಸಿದ ಬಣ್ಣಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿರುವ ಪಪ್ಪಾಯಕ್ಕೆ ಸಮ ಪ್ರಮಾಣದಲ್ಲಿ ಸುರಿಯಿರಿ. ಹೀಗೆ ಸುರಿಯುವಾಗ ಪಪ್ಪಾಯದ ಜತೆಗೆ ಸಕ್ಕರೆ ಪಾಕದ ಮಿಶ್ರಣ ವನ್ನೂ ಹಾಕಬೇಕು. ನಾಲ್ಕು ಕಪ್‌ ಗಳಿಗೆ ಕಾಲು ಚಮಚದಷ್ಟು ಬಣ್ಣವನ್ನು ಹಾಕಬಹುದು. ಒಂದು ದಿನ ಬಿಟ್ಟು ಮರುದಿನ ಕಲರ್‌ ಕಪ್‌ ಗಳಿಂದ ಪಪ್ಪಾಯವನ್ನು ಬೇರ್ಪಡಿಸಿ ಸಂಪೂರ್ಣ ತೇವಾಂಶವನ್ನು ತೆಗೆಯಬೇಕು. ಅನಂತರ ಪಾಕವನ್ನು ಹಾಕಲೇಬಾರದು. ಒಂದು ದಿನ ಅಥವಾ 24 ಗಂಟೆಗಳ ಕಾಲ ಇದನ್ನು ಚೆನ್ನಾಗಿ ಬಿಸಿಲಿಗೆ ಒಣಗಲು ಬಿಡಿ. ಸಂಪೂರ್ಣ ಡ್ರೈ ಆದ ಬಳಿಕ ಡಬ್ಬದಲ್ಲಿ ಸಂಗ್ರಹಿಸಿಟ್ಟು, ಅಗತ್ಯವಿದ್ದಾಗ ಐಸ್‌ ಕ್ರೀಮ್‌, ಕೇಕ್‌ ಅಥವಾ ಆಯ್ದ ಸಿಹಿ ಖಾದ್ಯಗಳಿಗೆ ಬಳಸಬಹುದು. 

ಭರತ್‌ ರಾಜ್‌ ಕರ್ತಡ್ಕ 

Advertisement
Advertisement

Udayavani is now on Telegram. Click here to join our channel and stay updated with the latest news.

Next