Advertisement

Ranji Trophy;ವಿದರ್ಭ ಫೈನಲ್ ಗೆ ಲಗ್ಗೆ: ಮುಂಬೈ ನೊಂದಿಗೆ ಪ್ರಶಸ್ತಿಗಾಗಿ ಸಮರ

08:29 PM Mar 06, 2024 | Team Udayavani |

ಮುಂಬಯಿ: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ಬುಧವಾರ (ಮಾರ್ಚ್ 6) ನಡೆದ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ವಿದರ್ಭ ತಂಡ ಮಧ್ಯಪ್ರದೇಶ ವಿರುದ್ಧ 62 ರನ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.

Advertisement

“ರಣಜಿ ರಾಜ’ ಮುಂಬಯಿ 48ನೇ ಸಲ ಫೈನಲ್‌ ಪ್ರವೇಶಿಸಿದ್ದು, ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯಲಿರುವ ಪ್ರಶಸ್ತಿ ಸಮರದಲ್ಲಿ ವಿದರ್ಭ ವಿರುದ್ಧ ಸೆಣಸಲಿದೆ.48ನೇ ರಣಜಿ ಟ್ರೋಫಿ ಫೈನಲ್‌ ಆಡುತ್ತಿರುವ ಮುಂಬೈ ತನ್ನ 42ನೇ ಪ್ರಶಸ್ತಿಗೆ ಗುರಿ ಇರಿಸಿಕೊಂಡಿದೆ.ಮಾರ್ಚ್ 10 (ಭಾನುವಾರ) ಫೈನಲ್ ಪಂದ್ಯ ಆರಂಭವಾಗಲಿದೆ.

ಮಧ್ಯಪ್ರದೇಶಕ್ಕೆ ಫಲಿತಾಂಶವು ಅನಿವಾರ್ಯವಾಗಿತ್ತು ನಾಲ್ಕು ವಿಕೆಟ್‌ಗಳು ಕೈಯಲ್ಲಿದ್ದು ಗೆಲುವಿಗೆ ಇನ್ನೂ 93 ರನ್‌ಗಳ ಅಗತ್ಯವಿತ್ತು,  ಆದರೆ ವಿದರ್ಭ ಬೆಳಗಿನ ಸೆಷನ್‌ನಲ್ಲಿಯೇ ಪಂದ್ಯವನ್ನು ಗೆಲ್ಲುವುದನ್ನು ಖಚಿತಪಡಿಸಿತು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ 170 & 402 (ಯಶ್ ರಾಥೋಡ್ 141; ಅನುಭವ್ ಅಗರ್ವಾಲ್ 5-92) ಮಧ್ಯಪ್ರದೇಶ 252 & 258 (ಯಶ್ ದುಬೆ 94, ಹರ್ಷ್ ಗಾವ್ಲಿ 67, ಅಕ್ಷಯ್ ವಾಖರೆ 3-38, ಯಶ್ ಠಾಕೂರ್ 3-60 )

Advertisement

Udayavani is now on Telegram. Click here to join our channel and stay updated with the latest news.

Next