Advertisement
ರಾತ್ರಿ ಮನೆಯ ಅಂಗಳದಲ್ಲಿ ಕುಳಿತು ಅಮ್ಮನ ಕೈತ್ತುತ್ತು ತಿನ್ನುತ್ತಾ ಯಾವ ಕಡೆಗೆ ಹೋಗುವುದು ಎನ್ನುವುದರ ಬಗ್ಗೆ ಚರ್ಚೆ ಶುರುವಾಯಿತು. ಅದೇ ಸಮಯಕ್ಕೆ ನನ್ನ ಅಕ್ಕ ಸ್ವಲ್ಪ ಸಮಯ ಯೋಚಿಸಿ ವರಂಗಕ್ಕೆ ಹೋಗೋಣವಾ ಎಂದಳು. ನಾವಿನ್ನೂ ಅದರ ಹೆಸರೇ ಕೇಳಿರಲಿಲ್ಲ. ಹಾಗಾಗಿ ಎಲ್ಲರೂ ಒಬ್ಬರ ಮುಖ ಇನ್ನೊಬ್ಬರು ನೋಡಿ ಕೊಂಡೆವು. ನಮ್ಮ ಮುಖಚರ್ಯೆ ನೋಡಿ ಅವಳು ಕಿರು ನಗೆ ಬೀರಿ ನಾಳೆ ನಿಮ್ಮನ್ನು ಕರೆದುಕೊಂಡು ಹೋಗುವ ಕೆಲಸ ನನ್ನದು. ತಲೆ ಕೆಡೆಸಿಕೊಳ್ಳಬೇಡಿ ಎಂದಳು. ಆಕೆಯ ಮಾತಿನ ಧೈರ್ಯದ ಮೇಲೆ ಹಾಗೆ ನಿದ್ದೆಗೆ ಜಾರಿದೆವು.
Related Articles
ನಮ್ಮ ಬೈಕ್ ಆ ಒಳ ರಸ್ತೆಯಲ್ಲಿ ಸಾಗುತ್ತಿದ್ದಂತೆ ಆ ಕಾಡು ತಂಪಾದ ಗಾಳಿ ಪ್ರಕೃತಿಯ ಸೌಂದರ್ಯವನ್ನು ನಾಚಿಸುವಂತಿದ್ದವು. ಸಾಲು ಮರಗಳು ನಮ್ಮನ್ನು ಸ್ವಾಗತಿಸುವಂತಿದ್ದವು. ಅಂತೂ ಇಂತೂ ನಮ್ಮ ಪಯಣ ವರಂಗದ ಸಮೀಪಕ್ಕೆ ಬಂದು ನಿಂತಿತು. ಸುತ್ತಲೂ ಹಚ್ಚ ಹಸಿರು ಗದ್ದೆ ನಡುವಲ್ಲಿ ಒಂದು ಸಣ್ಣ ದಾರಿ. ನಡೆದು ಹೋಗುತ್ತಿದ್ದಂತೆ ನಮಗೆ ಮೊದಲು ಕಾಣುವುದು ಒಂದು ಸುಂದರವಾದ ಹಳೆಯ ಮನೆ ಅಲ್ಲಿಯೇ ಕಟ್ಟೆಯ ಮೇಲೆ ಕೂತ ಜನಗಳು. ಅಲ್ಲಿಯೇ ಪಕ್ಕ ಒಂದು ಚಿಕ್ಕ ಕೌಂಟರ್, ಅಲ್ಲಿ ಹರಕೆಗಳನ್ನು ಹೇಳಿಕೊಂಡಿದ್ದರೆ ಪಾವತಿ ಮಾಡಿ ಮುಂದೆ ತೆರಳಬಹುದು.
Advertisement
ತುಂಬಿ ತುಳುಕುವ ನೀರುಮುಂದೆ ಅದೇ ಗದ್ದೆಯ ಅಂಚಿನಲ್ಲಿ ಹೊಳೆ. ಅದನ್ನು ಕಂಡೊಂಡನೆ ಎಲ್ಲರೂ ಅಕ್ಕನ ಮುಖ ನೋಡಿದೆವು. ಅಕ್ಕ ಇಂತ ದ್ದೊಂದು ಸುಂದರ ಪ್ರದೇಶಕ್ಕೆ ಕರೆದುಕೊಂಡು ಬರುತ್ತಾಳೆ ಎಂಬುದನ್ನು ನಾವು ಊಹಿಸಿಯೇ ಇರಲಿಲ್ಲ. ಮನದಲ್ಲಿ ಅದೇನೋ ಖುಷಿ, ಹಾಗೇ ನನಗೆ ಸ್ವಲ್ಪ ಭಯವೂ ಪ್ರಾರಂಭವಾಯಿತು. ಏಕೆಂದರೆ ನೀರೆಂದರೆ ಸ್ವಲ್ಪ ಭಯ. ನಾವು ಹೋಗಬೇಕಾದದ್ದು ಹೊಳೆಯ ಮಧ್ಯದಲ್ಲಿರುವ ಬಸದಿಗೆ ಆ ಬಸದಿ ಸುತ್ತಲೂ ತುಂಬಿ ತುಳುಕುವ ನೀರು. ಅದರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಚೆಂದದ ತಾವರೆ. ಹೀಗೆ ಅದನ್ನು ದೂರ ನಿಂತು ನೋಡುವಾಗಲೇ ತುಂಬಾ ಖುಷಿ ಕೊಡುತ್ತಿತ್ತು. ಅನಂತರ ನಾನು ಮತ್ತು ನನ್ನ ಅಕ್ಕ, ಎಲ್ಲರೂ ದೋಣಿ ಹತ್ತಿಯಾಗಿತ್ತು. ಅನಂತರ ನನ್ನ ಸರದಿ! ಅಕ್ಕ ಅಲ್ಲಿಂದಲೇ ಏನಾಗುವುದಿಲ್ಲ ಎಂದು ಕೈ ಮುಂದೆ ಚಾಚಿದಾಗ ಧೈರ್ಯದಿಂದ ಕುಳಿತೆ. ಅಂಬಿಗ ನಮ್ಮನ್ನು ದಡಕ್ಕೆ ತಲುಪಿಸಿ ಇಳಿಸಿದ್ದೆ ನಾವೆಲ್ಲರೂ ಬಸದಿಯೊಳಗೆ ಹೋದೆವು. ನಾಲ್ಕೂ ಕಡೆಗಳಲ್ಲೂ ಬಾಗಿಲು ಸುತ್ತಲೂ ಜೈನರ ದೇವರು. ಅಲ್ಲಿಯೇ ಪ್ರದ ಕ್ಷಿಣೆ ಹಾಕಲು ಚಿಕ್ಕದಾರಿ ಅದೊಂದು ಅದ್ಭುತ. ದೇವರಿಗೆ ನಮಸ್ಕರಿಸಿ ಅಲ್ಲಿಯೇ ಮೆಟ್ಟಿಲ ಮೇಲೆ ಕುಳಿತು ಆನಂದಿಸಿದೆವು. ಮತ್ತೆ ಬಂದ ದೋಣಿಯನ್ನು ಏರಿ ಹಿಂತಿರುಗಿದೆವು. ಬಹುಶಃ ಅಲ್ಲಿ ನೀವು ಅದೆಷ್ಟು ಬಾರಿ ಹೋದರೂ ನಿಮಗೆ ಸಾಕೆನಿಸಲು ಸಾಧ್ಯವಿಲ್ಲ. ರೂಟ್ ಮ್ಯಾಪ್
·ಮಂಗಳೂರಿನಿಂದ 73 ಕಿ.ಮೀ.
· ಬೇಕಾದ ತಿಂಡಿ-ತಿನಿಸುಗಳನ್ನು ನಾವೇ ಕೊಂಡೊಯ್ಯಬೇಕು.
· ಹೆಬ್ರಿಯಿಂದ ಕಾರ್ಕಳ ಮಾರ್ಗವಾಗಿ ಹೋಗುವ ಬಸ್ಸುಗಳು ವರಂಗಕ್ಕೆ ಹೋಗುತ್ತವೆ. ಪ್ರೀತಿ ಭಟ್ ಗುಣವಂತೆ