ನಾಳೆ ಸಂಡೇ. ಮಕ್ಕಳಿಗೆ ಬಿಡುವಿರುತ್ತೆ. ವಾರದಲ್ಲಿ ಒಂದು ದಿನ ಬರುವ ಈ ವಿರಾಮದಲ್ಲಿ ಅವರಿಗೆ ಪೇಂಟಿಂಗ್ ಕಲಿಸಬೇಕೆಂದು ನೀವು ತೀರ್ಮಾನಿಸಿದ್ದರೆ, ಬೆಳಗ್ಗೆಯೇ ಸೀದಾ ಕಬ್ಬನ್ ಪಾರ್ಕ್‌ಗೆ ಹೋಗಿ! “ಅರೇ, ಆ ಪಾರ್ಕಿಗೆ ಏನ್ಮಾಡೋದು?’ ಎಂಬ ಪ್ರಶ್ನೆಯೇ! ಪ್ರತಿ ಭಾನುವಾರ ಅಲ್ಲೊಬ್ಬರು ಆರ್ಟ್ ಟೀಚರ್, ಕುಂಚ, ಪೆನ್ಸಿಲ್ ಹಿಡಿದು ಕುಳಿತಿರುತ್ತಾರೆ. ಅವರ ಎದುರು ಸಾಲು ಸಾಲು ಮಕ್ಕಳಿರುತ್ತಾರೆ. ಕನ್ನಿಕಾ ಗುಪ್ತಾ ಎಂಬ ಇಲ್ಲುಸ್ಟ್ರೇಟರ್ ಇದೀಗ ಕಬ್ಬನ್ ಪಾರ್ಕಿನಲ್ಲಿ “ದಿ ನ್ಯೂ ಕಲರಿಂಗ್ ಕ್ಲಬ್’ ಆರಂಭಿಸಿದ್ದಾರೆ. ಕಲರ್ ಪೆನ್ಸಿಲ್, ಸ್ಕೆಚ್ ಪೆನ್, ಖಾಲಿ ಪೇಪರ್ ಒದಗಿಸುವ ಈ ಕ್ಲಬ್‌ನಲ್ಲಿ, ಸಣ್ಣ ಮಕ್ಕಳಲ್ಲದೆ, ಯುವಕ- ಯುವತಿಯರೂ ಪೇಂಟಿಂಗ್ ಕ್ಲಾಸ್ ಕಲಿಯುತ್ತಿದ್ದಾರೆ.
ನಿಸರ್ಗದ ನಡುವೆ ಪೇಂಟಿಂಗ್ ಕಲಿಯುವ ಮಜಾವೇ ಬೇರೆ. ಚಿತ್ರಕಲೆ ಬೇಗ ಸಿದ್ಧಿಸುವುದಲ್ಲದೆ, ಏಕಾಗ್ರತೆಗೂ ಇದರಿಂದ ಲಾಭವಿದೆ ಎನ್ನುವುದು ಅನುಭವಿ ಕಲಾವಿದರ ಮಾತು..
ಏನಿದು?: ಚಿತ್ರಕಲೆ ತರಗತಿ ಎಲ್ಲಿ?: ಕಬ್ಬನ್ ಪಾರ್ಕ್
ಯಾವಾಗ?: ಪ್ರತಿ ಭಾನುವಾರ ಬೆಳಗ್ಗೆ 7ರಿಂದ 9