Advertisement
ಮಾನವನ ಹಸ್ತಕ್ಷೇಪದಿಂದಾಗಿ, ಇಡೀ ವಿಶ್ವವೇ ಮಾಲಿನ್ಯ ಪೀಡೆಯಿಂದ ಬಳಲುತ್ತಿದೆ. ಹಾಗಾಗಿ, ಮಾಲಿನ್ಯದ ಸೋಂಕು ಇರದ ಜಾಗಗಳ ಹುಡುಕಾಟದಲ್ಲಿ ಪರಿಸರ ವಿಜ್ಞಾನಿಗಳು ನಿರತರಾಗಿದ್ದಾರೆ. ಇಂಥದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದ ಕೊಲರಾಡೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ತಂಡವೊಂದು ಭೂಮಿಯ ಮೇಲೆ ಮಾನವನ ಹಸ್ತಕ್ಷೇಪವೇ ಇಲ್ಲದಂಥ ಸ್ವಚ್ಛ ಪರಿಸರವಿರುವ ಜಾಗವೊಂದನ್ನು ಪತ್ತೆ ಮಾಡಿದೆ.
ವರ್ಲ್ಡ್ ಏರ್ ಕ್ವಾಲಿಟಿ ರಿಪೋರ್ಟ್ 2019ರ ಪ್ರಕಾರ, ಜಗತ್ತಿನ ಅತಿ ಮಾಲಿನ್ಯ ನಗರಗಳಲ್ಲಿ 30 ನಗರಗಳು ಭಾರತದಲ್ಲೇ ಇವೆ. 2019ರಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ವಿಶ್ವದ ಅತಿ ಮಾಲಿನ್ಯ ನಗರವಾಗಿತ್ತು. ಚೀನಾದ ಹೊಟಾನ್ ನಗರ 2ನೇ ಸ್ಥಾನದಲ್ಲಿದ್ದರೆ, ದಿಲ್ಲಿ 3ನೇ ಸ್ಥಾನದಲ್ಲಿತ್ತು. ಏರೋಸೋಲ್ ಪ್ರಾಮುಖ್ಯತೆಯೇನು?
ಸಾಮಾನ್ಯವಾಗಿ, ಮಾನವನಿಂದ ಹಾಗೂ ಅವನು ಬಳಸುವ ಯಂತ್ರೋಪಕರಣಗಳಿಂದ ಬರುವ ಮಾಲಿನ್ಯಕಾರಕ ಕಣಗಳು ವಾತಾ ವರಣದಲ್ಲಿ ಸೇರಿಕೊಂಡು ಮಾರಕ ಏರೋ ಸೋಲ್‌ಗಳಾಗಿ ಹರಡಿಕೊಂಡಿರುತ್ತವೆ. ಆದರೆ, ದಕ್ಷಿಣ ಅಂಟಾರ್ಟಿಕಾದಲ್ಲಿ ಆಮ್ಲಜನಕ ಸೇರಿ ದಂತೆ ಆರೋಗ್ಯಕ್ಕೆ ಬೇಕಾದ ಕಣಗಳೇ ಹೇರಳ ವಾಗಿವೆ. ಜೊತೆಗೆ, ಆ ಸಾಗರ ನೀರು ಬಯೋ ವೇಸ್ಟೇಜ್‌ನಿಂದ ಮುಕ್ತವಾಗಿದ್ದು, ಅಲ್ಲಿನ ತೀರ ಬಯೋ ನ್ಯೂಟ್ರಿಯೆಂಟ್ಸ್‌ಗಳಿಂದ ತುಂಬಿದೆ ಎಂದು ತಂಡ ಹೇಳಿದೆ.