ಬೊಗೋಟಾ: ಕೊಲಂಬಿಯಾದ ಕ್ಯಾರಿಬೀನ್ ಕಡಲ ತೀರದ ಬಳಿಯಲ್ಲಿ 1708ರಲ್ಲಿ ಮುಳುಗಿದ್ದ ಸ್ಯಾನ್ ಜೋಸ್ ಹಡಗಿನ ಬಳಿಯಲ್ಲೇ ಎರಡು ಬಂಗಾರ ತುಂಬಿರುವ ಹಡಗುಗಳು ಪತ್ತೆಯಾಗಿವೆ.
ಈ ಹಡಗುಗಳಲ್ಲಿ ಬರೋಬ್ಬರಿ 1.32 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವಿರುವುದಾಗಿ ಹೇಳಲಾಗಿದೆ.ಈ ಬಂಗಾರ ತುಂಬಿರುವ ಹಡಗುಗಳು ಸುಮಾರು 300 ವರ್ಷಗಳಷ್ಟು ಹಳೆಯದ್ದಾಗಿದೆ.
3,100 ಅಡಿಯಷ್ಟು ಆಳದಲ್ಲಿರುವ ಹಡಗಿನ ವಿಡಿಯೋವನ್ನು ರಿಮೋಟ್ ನಿಯಂತ್ರಿತ ಸಾಧನದಿಂದ ಚಿತ್ರೀಕರಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ವಿಡಿಯೋದಲ್ಲಿ ಅಲ್ಲಲ್ಲಿ ಚಿನ್ನದ ನಾಣ್ಯಗಳು ಮಡಕೆಯ ತುಂಡುಗಳು ಹಾಗೂ ಪಿಂಗಾಣಿ ಬಟ್ಟಲಿನ ಚೂರುಗಳು ಇರುವುದು ಕಂಡುಬಂದಿದೆ. ಅಲ್ಲದೆ, ಹಡಗಿನ ಪಕ್ಕ ಸಾಕಷ್ಟು ಪಿರಂಗಿಗಳೂ ಸಮುದ್ರದ ಆಳದಲ್ಲಿ ಕಂಡುಬಂದಿವೆ.
ಈಗ ಪತ್ತೆಯಾಗಿರುವ ಚಿನ್ನವನ್ನು ಸಮುದ್ರದಿಂದ ಮೇಲೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೊಲಂಬಿಯಾ ಅಧ್ಯಕ್ಷ ಇವಾನ್ ಡ್ನೂಕ್ ತಿಳಿಸಿದ್ದಾರೆ.