Advertisement
ಏರ್‌ಬಸ್‌ನ ಸಿ 295 ವಿಮಾನಗಳಿಗಾಗಿ ಸ್ಪೇನ್‌ನ ಕಂಪನಿ ಜತೆ 2021ರಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ ಈ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಪೇನ್‌ನ ಪ್ರಧಾನಿ ಪೆದ್ರೋ ಸ್ಯಾನ್‌ಸೆಜ್ ಕೂಡ ಮೋದಿ ಅವರೊಂದಿಗೆ ಭಾಗಿಯಾಗಿದ್ದರು. ಈ ಯೋಜನೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಸುವುದು ಮಾತ್ರವಲ್ಲದೆ, ಮೇಕ್ ಇನ್ ಇಂಡಿಯಾ; ಮೇಕ್ ಫಾರ್ ವರ್ಲ್ಡ್ ಯೋಜ ನೆಗೆ ವೇಗ ನೀಡಿದೆ. ಮುಂದಿನ ದಿನಗಳಲ್ಲಿ ಭಾರ ತ ದಿಂದ ರಫ್ತು ಸಹ ಮಾಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ರತನ್ ಟಾಟಾ ಅವರಿಗೆ ಗೌರವ ಸಲ್ಲಿಸಿದರು. ಇದ ಕ್ಕೂ ಮುನ್ನ ಪ್ರಧಾನಿ ಮೋದಿ ಹಾಗೂ ಪೆದ್ರೋ ವಡೋದರಾದಲ್ಲಿ 2.5 ಕಿ.ಮೀ. ರೋಡ್ ಶೋ ನಡೆಸಿದರು.
ಭಾರತೀಯ ಸೇನೆ ಏರ್‌ಬಸ್ ಮಿಲಿಟರಿ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲು 2021ರಲ್ಲಿ ಸ್ಪೇನ್‌ನ ಸಂಸ್ಥೆಯ ಜೊತೆ ಭಾರತ 21,935 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿತ್ತು. ಅದ ರಂತೆ, ಒಟ್ಟು 56 ವಿಮಾನಗಳನ್ನು ಸ್ಪೇನ್ ಪೂರೈಕೆ ಮಾಡಬೇಕಿತ್ತು. ಇದರಲ್ಲಿ 16 ವಿಮಾನಗಳು ಸ್ಪೇನ್‌ನಲ್ಲೇ ತಯಾರಾಗಿ ಭಾರತಕ್ಕೆ ಬಂದರೆ, ಉಳಿದ 40 ವಿಮಾನಗಳು ವಡೋದರಾದ ಕಾರ್ಖಾನೆಯಲ್ಲಿ ತಯಾರಾಗಲಿವೆ. ಸ್ಪೇನ್‌ನಿಂದ 16 ವಿಮಾನಗಳು 2025ರ ಆಗಸ್ಟ್‌ನೊಳಗೆ ತಲುಪುವ ನಿರೀಕ್ಷೆ ಇದೆ. ಏರ್‌ಬಸ್ ವಿಮಾನದ ವೈಶಿಷ್ಟ್ಯ
ಏರ್‌ಬಸ್ ವಿಮಾನ ಮಧ್ಯಮ ಗಾತ್ರದ ಸರಕು ಸಾಗಣೆ ವಿಮಾನವಾಗಿದ್ದು, ವೈದ್ಯಕೀಯ ಸ್ಥಳಾಂತರ, ವಿಪತ್ತು ನಿರ್ವಹಣೆ, ನೌಕಾಪಡೆ ಗಸ್ತಿಗೆ ಬಳಸಲಾಗುತ್ತದೆ. 13 ಮೀ. ಉದ್ದವಿರುವ ಈ ವಿಮಾನವನ್ನು 12 ಮೀ. ಅಗಲದ ರನ್‌ವೇನಲ್ಲೂ 180 ಡಿಗ್ರಿಯಷ್ಟು ತಿರುಗಿಸಬಹುದು. ಗರಿಷ್ಠ 10 ಟನ್ ಎತ್ತಬಲ್ಲ ಈ ವಿಮಾನ, ಒಂದು ಬಾರಿಗೆ 71 ಸೈನಿಕರು, 24 ಸ್ಟ್ರೆಚರ್, 7 ಮಂದಿ ವೈದ್ಯರನ್ನು ಹೊತ್ತೂಯ್ಯಬಲ್ಲದು. ಇದರಲ್ಲಿ ಲ್ಯಾಂಡ್ ರೋವರ್ ಗಾತ್ರದ 3 ಕಾರುಗಳನ್ನು ಸಹ ಹೊತ್ತೂಯ್ಯಬಹುದು. ವಿಶ್ವದಲ್ಲಿ ಪ್ರಸ್ತುತ 223 ಏರ್‌ಬಸ್ ಸಿ 295 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
Related Articles
ಮೇಕ್ ಇನ್ ಇಂಡಿಯಾಕ್ಕೆ ಭಾರಿ ಬಲ
ಭಾರತ ಸೇನೆಯಲ್ಲಿ ಈಗಾಗಲೇ ಇರುವ ಅವ್ರೋ-748 ವಿಮಾನಗಳನ್ನು ಏರ್‌ಬಸ್ ಬದಲಾಯಿಸಲಿದ್ದು, ಇದು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೂ ಬಲ ನೀಡಲಿದೆ. ರಕ್ಷಣಾ ಪರಿಕರಗಳಿಗೆ ಭಾರತ ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ರಷ್ಯಾ ಉಕ್ರೇನ್ ಯುದ್ಧದ ಬಳಿಕ ರಕ್ಷಣಾ ಪರಿಕರಗಳ ಕೊರತೆ ಉಂಟಾಗಿತ್ತು.
Advertisement
ಇದೀಗ ಭಾರತದಲ್ಲೇ ಮಿಲಿಟರಿ ವಿಮಾನ ತಯಾರಾಗುತ್ತಿರುವುದು ಭಾರತದ ರಕ್ಷಣಾ ವಲಯಕ್ಕೆ ಹೆಚ್ಚು ಬಲ ಕೊಟ್ಟಿದೆ. ಈ ವಿಮಾನದಲ್ಲಿ ಒಟ್ಟು 14000 ಬಿಡಿಭಾಗಗಳಿದ್ದು, ಇದರಲ್ಲಿ 13000 ಬಿಡಿಭಾಗಗಳನ್ನು ಭಾರತದಲ್ಲೇ ತಯಾರು ಮಾಡಲಾಗುತ್ತದೆ. ಹೀಗಾಗಿ ಭಾರತೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳೂ ದೊರೆಯಲಿವೆ.
ಭಾರತಕ್ಕೆ ಭೇಟಿ ನೀಡಿರುವ ಸ್ಪೇನ್ ಪ್ರಧಾನಿ ಪೆದ್ರೋ ಸ್ಯಾನ್‌ಸೆಜ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ. ಮೂಲ ಸೌಕರ್ಯ, ರೈಲ್ವೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 2026ನೇ ಇಸವಿಯನ್ನು ಭಾರತ ಮತ್ತು ಸ್ಪೇನ್‌ನ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಎಐ ವರ್ಷ ಎಂದು ಆಚರಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಉಭಯ ನಾಯಕರು ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ಭಾರತದ ಮೇಲೆ ವಿಶ್ವದ ಗಮನ ಈಗ ಹೆಚ್ಚಿದೆ: ಮೋದಿ
ಇಡೀ ವಿಶ್ವ ಈಗ ಭಾರತದ ಮಾತನ್ನು ಗಮನವಿಟ್ಟು ಕೇಳುತ್ತಿದೆ. ಅಲ್ಲದೇ ಹೊಸ ವಿಶ್ವಾಸದೊಂದಿಗೆ ವಿಶ್ವದ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತ್‌ನಲ್ಲಿ 4,800 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ನಾವು ನಿರಂತರವಾಗಿ ಅಭಿವೃದ್ಧಿ ಸಾಧಿಸುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದೆ. ಎಲ್ಲಾ ದೇಶಗಳು ಭಾರತದಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿವೆ ಎಂದರು.