Advertisement

Chadchan town; ಬಸ್‍ಗಳ ಮಧ್ಯೆ ಡಿಕ್ಕಿ; 40 ಪ್ರಯಾಣಿಕರಿಗೆ ಗಾಯ

03:08 PM Feb 19, 2024 | keerthan |

ವಿಜಯಪುರ: ಖಾಸಗಿ ಶಾಲಾ ವಾಹನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸರ್ಕಾರಿ ಸಾರಿಗೆ ಸಂಸ್ಥೆಯ ಎರಡು ಬಸ್‍ಗಳ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಚಡಚಣ ಪಟ್ಟಣದಲ್ಲಿ ಜರುಗಿದೆ.

Advertisement

ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ 8 ಜನರು ಸೇರಿದಂತೆ 40 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಚಡಚಣ ಪಟ್ಟಣದ ದೇವರನಿಂಬರಗಿ ಕ್ರಾಸ್ ಬಳಿ ಸಾರಿಗೆ ಸಂಸ್ಥೆ ಬಸ್ ಸಾಗುವಾಗ ಏಕಾಏಕಿ ಖಾಸಗಿ ವಾಹನ ರಡ್ತೆಯಲ್ಲಿ ಅಡ್ಡ ಬಂದಿದೆ. ಶಾಲಾ ವಾಹನಕ್ಕೆ ಆಗಲಿದ್ದ ಅಪಘಾತ ತಪ್ಪಿಸಲು ಸಾರಿಗೆ ಸಂಸ್ಥೆಯ ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಹಿಂದೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಮತ್ತೊಂದು ಬ್ರೇಕ್ ಹಾಕಿದ ಬಸ್‍ನ ಹಿಂಬದಿ ಡಿಕ್ಕಿ ಹೊಡೆದಿದೆ.

ಈ ಅಪಘಾತದಿಂದ 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಇದರಲ್ಲಿ 8 ಜನರ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಶಾಲಾ ಬಸ್‍ನಲ್ಲಿದ್ದ ಕೆಲ ಮಕ್ಕಳಿಗೂ ಗಾಯಗಳಾಗಿರುವ ವರದಿ ಇದೆ.

ಗಾಯಾಳುಗಳನ್ನು ಕೂಡಲೇ ಚಡಚಣ ಆಸ್ಪತ್ರೆಗೆ ಸಾಗಿಸಿದ್‍ದು, ಗಂಭೀರ ಗಾಯಗೊಂಢವರನ್ನು ವಿಜಯಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತತಲೇ ಚಡಚಣ ಪೊಲೀಸರು ಸ್ಥಳಕ್ಕೆ  ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next