Advertisement
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ಸಮರ್ಥರನ್ನು ನ್ಯಾಯಮೂರ್ತಿ ಗಳಾಗಿ ಆಯ್ಕೆ ಮಾಡಬೇಕೇ ಹೊರತು, ಕೊಲಿಜಿಯಂಗೆ ಗೊತ್ತಿರುವವರನ್ನಲ್ಲ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ನ್ಯಾಯಾಂಗ ವ್ಯವಸ್ಥೆಯಲ್ಲಿ “ದೊಡ್ಡ ಮಟ್ಟದ ರಾಜಕೀಯ’ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ.
Related Articles
Advertisement
ಕೊಲಿಜಿಯಂ ವ್ಯವಸ್ಥೆಯಲ್ಲಿನ ಮೂಲ ತಪ್ಪೇ, ನ್ಯಾಯಮೂರ್ತಿಗಳು ತಮಗೆ ಗೊತ್ತಿರುವ ಜಡ್ಜ್ಗಳನ್ನೇ ಶಿಫಾರಸು ಮಾಡುವುದು. ಅವರಿಗೆ ಗೊತ್ತಿಲ್ಲದ ನ್ಯಾಯಮೂರ್ತಿಗಳ ಬಗ್ಗೆ ಶಿಫಾರಸನ್ನೇ ಮಾಡುವುದಿಲ್ಲ. ಹೀಗಾಗಿ ಜಡ್ಜ್ಗಳಾಗಿ ಸಮರ್ಥ ರನ್ನು ನೇಮಕ ಮಾಡಬೇಕೇ ಹೊರತು, ಕೊಲಿಜಿಯಂನಲ್ಲಿ ಇರುವವರಿಗೆ ಗೊತ್ತಿರುವವರನ್ನಲ್ಲ ಎಂದರು.ಸರಕಾರವು ಒಂದು ಸ್ವತಂತ್ರ ವ್ಯವಸ್ಥೆಯನ್ನು ರೂಪಿಸಿ, ಈ ಮೂಲಕ ಮಾಹಿತಿಯನ್ನು ಕಲೆ ಹಾಕಿ ನ್ಯಾಯಮೂರ್ತಿಗಳ ನೇಮಿಸ ಬಹುದು. ಅಂದರೆ, ಸರಕಾರದ ಬಳಿ ಗುಪ್ತಚರ ದಳ ಸೇರಿದಂತೆ ಇತರ ಇಲಾಖೆಗಳ ವರದಿಗಳು ಇರುತ್ತವೆ. ಇದನ್ನು ನೋಡಿಕೊಂಡು ತೀರ್ಮಾನಿಸಬಹುದು. ಆದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಮಾರ್ಗಗಳಿಲ್ಲ ಎಂದರು. ರಿಜಿಜು ಹೇಳಿದ್ದು
-ನ್ಯಾಯಮೂರ್ತಿಗಳು ತೋರ್ಪಡಿಸದಿದ್ದರೂ ನ್ಯಾಯಾಂಗ ವ್ಯವಸ್ಥೆ ಯಲ್ಲಿ ದೊಡ್ಡ ರಾಜಕೀಯವಿದೆ. -ಜಡ್ಜ್ ಗಳು ಆಡಳಿತಾತ್ಮಕ ಕೆಲಸದಲ್ಲಿ ತೊಡಗಬೇಕೋ ಅಥವಾ ನ್ಯಾಯದಾನ ಮಾಡು ವುದರಲ್ಲಿ ನಿರತರಾಗಿರಬೇಕೋ? – ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿ ಸಿತು. ಆದರೆ ಸರಕಾರವೇಕೆ ಬದಲಿ ಮಾರ್ಗಕ್ಕೆ ಮುಂದಾಗಲಿಲ್ಲ? ಆಗಿನ ಸರಕಾರ ಬದಲಿಯಾಗಿ ಏನಾದರೂ ಮಾಡಬೇಕಿತ್ತು. -ಮೋದಿ ಸರಕಾರದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬೆಲೆ ಕೊಡುತ್ತಿದ್ದೇವೆ. ಇದುವರೆಗೆ ಅದಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ತಂದಿಲ್ಲ. -ನ್ಯಾಯಮೂರ್ತಿಗಳು ಪ್ರಕರಣವೊಂದರ ಕುರಿತು ಮೌಖೀಕ ಹೇಳಿಕೆಗಳನ್ನು ನೀಡಿದಾಗ ಹೆಚ್ಚು ಪ್ರಚಾರ ಸಿಗುತ್ತದೆ. ಈ ಮೂಲಕ ಹೆಚ್ಚು ಟೀಕೆಗಳನ್ನು ಆಹ್ವಾನಿಸುವ ಬದಲು ಆದೇಶಗಳ ಮುಖಾಂತರವೇ ಮಾತನಾಡ ಬೇಕು. -ದೇಶದ್ರೋಹಿ ಕಾನೂನು ಬಗ್ಗೆ ನಾವೇ ಒಂದು ಪರಿಹಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಹೇಳಿ ದ್ದೆವು. ಆದರೂ ನಮ್ಮ ಮಾತನ್ನು ಕೇಳದೆ ಅದನ್ನು ತೆಗೆದುಹಾಕಿತು. ಎಲ್ಲರಿಗೂ ಒಂದು ಲಕ್ಷ್ಮಣ ರೇಖೆ ಇರುತ್ತದೆ ಎಂಬುದನ್ನು ಮರೆಯಬಾರದು. -ಕೊರೊನಾ ವೇಳೆಯಲ್ಲಿ ದಿಲ್ಲಿ ಹೈಕೋರ್ಟ್,ತಜ್ಞರ ಸಮಿತಿ ನೇಮಿಸಲು ನಿರ್ದೇಶಿಸಿತ್ತು. ಆಗ ನಾವು ಸಾಲಿಸಿಟರ್ ಜನರಲ್(ತುಷಾರ್ ಮೆಹ್ತಾ) ಅವರಿಗೆ “ಇದು ನಿಮ್ಮ ಕೆಲಸವಲ್ಲ, ಸರಕಾರದ ಕೆಲಸ’ ಎಂದು ಹೇಳಲು ಸೂಚಿಸಿದ್ದೆವು.