Advertisement

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

11:33 PM Jul 24, 2024 | Team Udayavani |

ಮಲ್ಪೆ: ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ವಿದ್ಯಾರ್ಥಿ ಕುಂಜಿಬೆಟ್ಟುವಿನ ಶಿವಾಜಿ ಅವರ ಐಫೋನ್‌ ಮೊಬೈಲ್‌ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಜು. 10ರಂದು ಬೆಳಗ್ಗೆ ಕಾಲೇಜಿನಲ್ಲಿ ಪರೀಕ್ಷೆ ಇದ್ದುದರಿಂದ ಅವರು ಮೊಬೈಲ್‌ ಸಹಿತ ಬ್ಯಾಗನ್ನು ಕೊಠಡಿಯ ಹೊರಗಿಟ್ಟು ಹೋಗಿದ್ದರು. ಪರೀಕ್ಷೆ ಬರೆದು ಬಂದು ಬಳಿಕ ನೋಡಿದಾಗ ಬ್ಯಾಗ್‌ ಇಟ್ಟ ಸ್ಥಳದಲ್ಲಿ ಇರಲಿಲ್ಲ.

ಆನಂತರ ಕಾಲೇಜಿನ ಬಳಿ ಇರುವ ಚರ್ಚ್‌ನ ಬಾವಿಯ ಬಳಿ ಬ್ಯಾಗ್‌ ಪತ್ತೆಯಾಗಿತ್ತು. ಆದರೆ ಆದರೊಳಗೆ ಮೊಬೈಲ್‌ ಮಾತ್ರ ಇರಲಿಲ್ಲ. ಬ್ಯಾಗ್‌ ನಿಖೀಲ್‌ ಎಂಬ ವಿದ್ಯಾರ್ಥಿಯ ಕೈಯಲ್ಲಿ ಇದ್ದ ಬಗ್ಗೆ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳಾದ ವೀಕ್ಷಿತ್‌ ಮತ್ತು ಆಕಾಶ್‌ ಅವರು ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಮೊಬೈಲ್‌ನ ಮೌಲ್ಯ 79 ಸಾವಿರ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next