Advertisement
ಶಿಲ್ಪಿಯ ಉಳಿಯೇಟು ಸಹಿಸಿಕೊಂಡ ಕಲ್ಪು ಶಿಲೆಯಾಗದೇ ಉಳಿಯುವುದೇ..? ಸಹಿಸಿಕೊಳ್ಳುವ ಮನಸ್ಥಿತಿ ಬದುಕಿನಲ್ಲಿ ಬಹಳ ಮುಖ್ಯ. ಹಾಗಂತ ಸಹಿಸುವಿಕೆಗೆ ಮಿತಿ ಇಲ್ಲ ಅಂತರ್ಥವಲ್ಲ.
Related Articles
Advertisement
ಬಂಗಾರ ಬೆಂಕಿ ನೋಡಿ ಹೆದರದು, ಬದಲಾಗಿ ಅದರಲ್ಲಿ ಬಿಸಿಯಾಗಿ, ಕರಗಿ ಹೊಳಪು ಹೆಚ್ಚಿಸಿಕೊಳ್ಳುತ್ತದೆ. ಮೌಲ್ಯ ಪಡೆದುಕೊಳ್ಳುತ್ತದೆ.
ರಸ್ತೆ ಮೇಲೆ ನಡೆಯುವಾಗ ನಾಯಿಗಳು ಹಿಂಬಾಲಿಸಿದಾಗ ನೀವು ಓಡಲು ಆರಂಭಿಸಿದರೆ ಅವುಗಳು ನಿಮ್ಮ ಹಿಂದೆ ಬರುತ್ತದೆ. ಆದರೆ ನೀವು ಅವುಗಳನ್ನು ಹೆದರಿಸಿದರೆ ಬೆದರಿ ಓಡಿ ಹೋಗುತ್ತದೆ. ಏನೆ ಆದರೂ ಧೈರ್ಯದಿಂದ ಎದುರಿಸಬೇಕು. ಆಗ ಬಯಸಿದ್ದು, ಸಾಧಿಸಬಹುದು. ಜೀವನವನ್ನು ಖುಷಿಯಾಗಿ ಕಳೆಯಬಹುದು.
ಓದಿ : ಭಾವನಾತ್ಮಕತೆಯ ಬದುಕನ್ನು ತೇಲಿಸಿದ ‘ಹಿನ್ನೀರ ಅಲೆಗಳು’
ಪ್ರತಿಯೊಬ್ಬರ ಬದುಕು ಹೂವಿನ ಹಾಸಿಗೆಯಲ್ಲ, ಅಲೆಗಳಿಲ್ಲದೆ ಸಮುದ್ರವಿಲ್ಲ, ಮುಳ್ಳಿಲ್ಲದ ಗುಲಾಬಿಯಲ್ಲ,ಅದೇ ರೀತಿ ಸಮಸ್ಯೆಗಳಿಲ್ಲದೆ ಬದುಕಿಲ್ಲ ಜೀವನದಲ್ಲಿ ಸುಖ ಸಂತೋಷಗಳು ಮಾತ್ರವಲ್ಲ ದುಃಖ ಕಷ್ಟಗಳನ್ನು ಸಹಿತ ಆನಂದದಿಂದ ಸಹಿಸುವುದನ್ನು, ಭರಿಸುವುದನ್ನು ಕಲಿತುಕೊಳ್ಳಬೇಕು. ಬದುಕು ಬಂದ ಹಾಗೆ ಸ್ವಿಕರಿಸುವುದನ್ನು ಕಲಿತುಕೊಂಡಾಗ ಬದುಕು ಬದುಕೆನ್ನಿಸಿಕೊಳ್ಳುತ್ತದೆ.
ಕತ್ತಲು ಶಾಶ್ವತವಲ್ಲ ಬೆಳಕು ಬಂದೇ ಬರುತ್ತದೆ. ಕಷ್ಟದಲ್ಲಿ ಸುಖವಿದೆ. ಕಷ್ಟವಿಲ್ಲದೆ ಲಾಭಗಳಿಲ್ಲ.
ಕಲ್ಲು ವರ್ಷಾನುಗಟ್ಟಲೆ ನೀರಿನಲ್ಲಿದ್ದರೂ ಸಹಿತ ಅದು ಮೆತ್ತಗೆ ಆಗುವುದೇ ಇಲ್ಲ, ಅದೇ ರೀತಿ ಕಷ್ಟಗಳೆಷ್ಟೆ ಬಂದರೂ ಸಹಿತ ಎದುರಿಸಿ ನಿಲ್ಲುವ ಧಯರ್ಯ ಮಾಡುವವರಿಗೆ ಯಾವ ತೊಮದರೆಯೂ ಆಗುವುದಿಲ್ಲ. ಬದುಕಿಗೆ ಧೈರ್ಯವೊಂದೆ ಮುಖ್ಯ ಸಾಧನ.
ಯಾರು ಕಷ್ಟ-ಸುಖ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುತ್ತಾರೋ ಅವರೇ ಸ್ಥಿತ ಪ್ರಜ್ಞರು. ಬದುಕೆಂದರೆ ಕಲಿಯುವುದರ ಬದಲಾವಣೆ ಮಾಡಿಕೊಳ್ಳುವುದು. ನಾವು ಈ ಪ್ರಪಂಚವನ್ನು ಸ್ವರ್ಗವನ್ನಾಗಲಿ ನರಕವನ್ನಾಗಲಿ ಮಾಡಿಕೊಳ್ಳಬಹುದು. ಒಂದು ವೇಳೆ ಬದುಕು ಮುಳ್ಳಿನ ಹಾದಿ ಆದರೂ ಸಹಿತ ಸಹನೆಯಿಂದ ಸಾಗಿದರೆ ಅದು ಹೂವಿನ ಹಾದಿ ಆಗುತ್ತದೆ. ಎಲ್ಲವೂ ನಮ್ಮ ಕೈಯಲ್ಲೇ ಇವೆ. ಬದುಕು ಹೇಳಿದಷ್ಟು ಸುಲಭವೂ ಅಲ್ಲ. ಕ್ಲಿಷ್ಟ ಎಂಬಷ್ಟು ಕ್ಲಿಷ್ಟವೂ ಅಲ್ಲ.