ಜಗಳೂರು: ಬೆಳೆ ವಿಮೆ ರೈತರ ಹಕ್ಕಾಗಿದ್ದು, ಮೊಬೈಲ್ ಮೂಲಕ ಅಗತ್ಯ ದತ್ತಾಂಶಗಳನ್ನು ರೈತರೇ ಸ್ವತಃ ಅಪ್‌ಲೋಡ್ ಮಾಡಿರಿ ವ್ಯತ್ಯಾಸವಾಗುವುದಿಲ್ಲ ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೆಳೆ ವಿಮೆ ಕುರಿತ ರೈತರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. 2016-17 ಸಾಲಿನಲ್ಲಿ 1029 ಮತ್ತು ಹಿಂಗಾರು ಬೆಳೆ ವಿಮೆಯ 826 ಜನರಿಗೆ ಹಿಂಗಾರು ಕಡ್ಲೆ ಬೆಳೆ ವಿಮೆ ಜಮಾ ಆಗಿದೆ. 152 ಜನರ ಅರ್ಜಿ ಬ್ಯಾಂಕ್ ಖಾತೆ ವ್ಯತ್ಯಾಸದಿಂದ ತಿರಸ್ಕೃತವಾಗಿದ್ದು, ಸರಿಪಡಿಸಲು ರೈತರು ಸಹಕರಿಸಿ 161 ಜನ ರೈತರು ಸೂರ್ಯಕಾಂತಿ ಬೆಳೆವಿಮೆ ಪಾವತಿಸಿದ್ದೀರಾ ಬರದಿದ್ದಕ್ಕೆ ಸಂಪೂರ್ಣವಾಗಿ ಸ್ಪಷ್ಟನೆ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
ವಿದ್ಯಾವಂತ ನಿರುದ್ಯೋಗಿ ಯುವಕರ ಹಾಗೂ ಇಲಾಖೆಗಳಿಂದ ಬೆಳೆ ಸರ್ವೆ ನಡೆಸಿದ್ದು, ದತ್ತಾಂಶಗಳ ಪಾರದರ್ಶಕತೆಗೆ ಆ್ಯಪ್ ಹಾಗೂ ತಂತ್ರಜ್ಞಾನದ ಮೂಲಕ ಬೆಳೆವಿಮೆಯನ್ನು ರೈತರ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆ. ಮೊಬೈಲ್ ನಂಬರ್ ಆಧಾರ ಕಾರ್ಡ್ ಸಂಖ್ಯೆ ಖಾತೆಗೆ ಲಿಂಕ್ ಮಾಡಿದರೆ ನೇರವಾಗಿ ರೈತರಿಗೆ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಮಾ ನಿಯಮಾವಳಿಗಳ ಬಗ್ಗೆ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ರೈತರ ಸಭೆ ಕರೆದು ಮಾಹಿತಿ ನೀಡಬೇಕು. ಗೊಂದಲಗಳು ಸೃಷ್ಟಿಸದಂತೆ ಕ್ರಮ ವಹಿಸಿ ಎಂದು ಸಲಹೆ ನೀಡಿದರು. ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮನವಿ ಮಾಡಿ ಪ್ರತಿ ಎಕರೆಗೆ 25 ಕೆಜಿಗಿಂತ ಅಧಿಕ ಯೂರಿಯಾ ಗೊಬ್ಬರ ಬಳಸಿದರೆ ಅವರ ತಾಕು ಸುಟ್ಟು ಹೋಗುತ್ತದೆ. 19-19 ನೀರಿನಲ್ಲಿ ಕರಗುವ ಗೊಬ್ಬರ ಬಳಕೆ ಮಾಡಿ ಹಾಗೂ ಮಣ್ಣಿನಿಂದ ಅಧಿಕ ಇಳುವರಿ ಸಾಧ್ಯ ಎಂದು ಕಿವಿಮಾತು ಹೇಳಿದರು.
ನೀರಾವರಿ ಹೋರಾಟ ಸಮಿತಿ ಸದಸ್ಯ ಕಲ್ಲೆರುದ್ರೇಶ್ ಮಾತನಾಡಿದರು. ಡಿವೈಎಸ್‌ಪಿ ನರಸಿಂಹ ತಾಮ್ರಾಧ್ವಜ್ ರೈತರಿಗೆ ಅನ್ಯಾಯವಾದರೆ ಕೇಳುವ ಶೈಲಿ ಬೇರೆ ಇದೆ ಆದರೆ ಮಹನೀಯರ ಕೊಡುಗೆಯಾಗಿರುವ ಪವಿತ್ರದಿನ ಸ್ವಾತಂತ್ರ್ಯ ದಿನಾಚರಣೆ ದಿನ ಬೇಡ ರೈತರ ವಿಮೆಗೆ ಪರಿಹಾರ ಸಿಗಲು ನಾವು ಸಹಕರಿಸುತ್ತೇವೆ. ಉದ್ವಿಗ್ನ ಬೇಡ ಅದಕ್ಕೂ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.
ಪ್ರಭಾರ ತಹಶೀಲ್ದಾರ್ ರಾಮಚಂದ್ರಪ್ಪ, ಇಒ ಮಲ್ಲಾನಾಯ್ಕ ,ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ , ಸಿಪಿಐ ಡಿ.ದುರುಗಪ್ಪ ಪಿಎಸ್‌ಐ ಉಮೇಶ ಬಾಬು, ಹಿರಿಯ ಹೋರಾಟಗಾರರಾದ ವಾಲಿಬಾಲ್ ತಿಮ್ಮಾರೆಡ್ಡಿ, ಎನ್.ಎಸ್. ರಾಜು ಇತರರು ಹಾಜರಿದ್ದರು.