Advertisement

ಗೋಡೆ ಕುಸಿದು ತಾಯಿ-ಮಗ ಸಾವು

12:33 PM Aug 15, 2019 | Team Udayavani |

ದಾವಣಗೆರೆ: ಮನೆಯ ಗೋಡೆ ಕುಸಿದು ತಾಯಿ ಮತ್ತು ಮಗ ಸಾವನ್ನಪ್ಪಿದ ಘಟನೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಉಮಾದೇವಿ (30) ಮತ್ತು ಅವರ ಪುತ್ರ ಮೂರು ವರ್ಷದ ಧನುಷ್ಯ ಎಂದು ತಿಳಿದುಬಂದಿದೆ.

Advertisement

ಮನೆಯವರು ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ತಾಯಿ ಮತ್ತು ಮಗನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರಗೆ ಸಾಗಿಸುವ ಮಧ್ಯದಲ್ಲೇ ಧನುಷ್ಯ ಸಾವನ್ನಪ್ಪಿದರೆ ಉಮಾದೇವಿ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಘಟನೆಗೆ ಸಂಬಂಧಿಸಿದಂತೆ ಸಂತೆಬೆನ್ನೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ


Advertisement

Udayavani is now on Telegram. Click here to join our channel and stay updated with the latest news.

Next