ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಮಾರ್ಗದಿಂದ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಇರಸವಾಡಿ ಗ್ರಾಮದ ಬಳಿಯ ಕೆರೆ ಬದಿಯಲ್ಲಿ ಸಾಗುವಾಗ ಡಾಂಬರ್ ರಸ್ತೆಯು ಕುಸಿದು ಹೋಗಿದೆ. ಹಲವು ತಿಂಗಳು ಕಳೆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸದ ಕಾರಣ ಸಾವಿರಾರು ವಾಹನಗಳು ಸವಾರರ ಪ್ರಾಣಕ್ಕೆ ಇದು ಕುತ್ತಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಇರಸವಾಡಿ ಗ್ರಾಮದ ಕೆರೆ ಬಳಿಯಲ್ಲೇ ಈ ರಸ್ತೆ ಇದೆ. ಈ ಹಿಂದೆ ಸುರಿದ ಭಾರಿ ಮಳೆ, ಹಾಗೂ ಕೆರೆಯಿಂದ ಬಂದ ಹೆಚ್ಚಿನ ನೀರಿನಿಂದ ರಸ್ತೆ ಕೊಚ್ಚಿ ಹೋಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಈ ರಸ್ತೆ ಬರುತ್ತದೆ. ತಿಂಗಳುಗಳೇ ಕಳೆದರೂ ಇನ್ನೂ ಇದರ ದುರಸ್ತಿಯಾಗಿಲ್ಲ. ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನ ಸಂಚಾರ ಇರುತ್ತದೆ. ಕಬ್ಬಿನ ಲಾರಿ, ಬಸ್, ಟ್ರ್ಯಾಕ್ಟರ್‌ಗಳು ಸಂಚರಿಸಿದಾಗ ರಸ್ತೆ ಕಂಪಿಸುವ ಅನುಭವವಾಗುತ್ತದೆ.
ಅಲ್ಲದೆ ಇಲ್ಲಿನ ಟಾರು, ಕಲ್ಲು, ಮಣ್ಣು ಕುಸಿಯುತ್ತಲೇ ಇದೆ. ಒಂದು ಬದಿಯಲ್ಲಿ ಕೆರೆ ಏರಿ ಮತ್ತೂಂದು ಬದಿಯಲ್ಲಿ 20 ಅಡಿ ಅಷ್ಟು ಹಳ್ಳದಲ್ಲಿ ನೀರಿನ ಕಾಲುವೆ ಮಧ್ಯೆ ಈ ರಸ್ತೆ ಹಾದು ಹೋಗಿದೆ. ಕೆರೆಯಿಂದ ಇಲ್ಲಿನ ಜಮೀನುಗಳಿಗೆ ನೀರು ಈ ರಸ್ತೆ ತಳಭಾಗದಲ್ಲೇ ಹಾದು ಹೋಗುತ್ತದೆ. ಕೊರ ಕಲು ಮತ್ತಷ್ಟು ಹೆಚ್ಚಾದರೆ ರಸ್ತೆ ಕುಸಿದು ಕಂದ ಕಕ್ಕೆ ವಾಹನಗಳು ಬಿದ್ದಲ್ಲಿ ಇಲ್ಲಿ ದೊಡ್ಡ ಅಪಾ ಯ ಸಂಭವಿಸುವ ಅಪಾಯ ಹೆಚ್ಚಾಗಿದೆ.
ತಡೆಗೋಡೆ ನಿರ್ಮಿಸಿ: ಇರಸವಾಡಿ ಗ್ರಾಮದ ಕೆರೆ ಬದಿಯಲ್ಲಿರುವ ಕಾಲುವೆ ಹಾಗೂ ಜಮೀನುಗಳ ಬದಿಯಲ್ಲಿ ತಡೆಗೋಡೆ ನಿರ್ಮಿಸಿರುವುದಿಂದ ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜನಪ್ರತಿ ನಿಧಿಗಳು, ಅಧಿಕಾರಿಗಳ ವರ್ಗವು ಹೆಚ್ಚಿನ ಗಮನಹರಿಸಬೇಕಾಗಿದೆ, ತಡೆಗೋಡೆ ನಿರ್ಮಾಣ ಮಾಡಿದರೆ. ಹೆಚ್ಚು ಅನುಕೂಲವಾಗುತ್ತದೆ ಎಂದು ವಾಹನ ಸವಾರರ ಆಗ್ರಹಿಸಿದ್ದಾರೆ.
ಅಪಾಘಾತ ಸ್ಥಳವಾಗಿದೆ: ಈ ಮಾರ್ಗದಲ್ಲಿ ಪ್ರತಿನಿತ್ಯ ಯಳಂದೂರು, ವೈ.ಕೆ.ಮೋಳೆ, ಇರಸವಾಡಿ, ಮಸಣಾಪುರ, ಚಾಟೀಪುರ, ಹೊಂಗನೂರು, ಬೂದಂಬಳ್ಳಿಮೋಳೆ, ರೇಚಂಬಳ್ಳಿ, ಹೆಗ್ಗಡೆಹುಂಡಿ, ಚಂದಕವಾಡಿ, ಆಲೂರು ಸೇರಿದಂತೆ ಸಾಕಷ್ಟು ಗ್ರಾಮದ ಜನರು ದಿನನಿತ್ಯ ಸಂಚರಿಸುತ್ತಾರೆ. ಆದರೆ ಇಲ್ಲಿ ಸವಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ಅಲ್ಪ ಯಾಮಾರಿದರೂ ಹತ್ತಾರು ಅಡಿ ಆಳದ ಕಂದಕಕ್ಕೆ ವಾಹನ ಬೀಳುವ ಅಪಾಯವಿದೆ. ರಸ್ತೆ ಪರಿಸ್ಥಿತಿ ಹೀಗಾದ ಬಳಿಕ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಪೊಲೀಸ್ ಠಾಣೆ ಅಧಿಕಾರಿಗಳು ರಸ್ತೆ ಎರಡು ಕಡೆ ಬ್ಯಾರಿಕೇಡ್ ಹಾಕಿದ್ದಾರೆ.
ಗ್ರಾಮದ ಕೆರೆಯ ಬದಿಯಲ್ಲಿ ರಸ್ತೆಯು ಕುಸಿತಗೊಂಡಿರುವ ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು. ರಾತ್ರಿ ವೇಳೆ ಇಲ್ಲಿ ಬಿದ್ದಿರುವ ಹಳ್ಳ ಕಾಣುವುದೇ ಇಲ್ಲ. ಅನೇಕರು ಇಲ್ಲಿ ಬಿದ್ದು ಗಾಯಗಳೂ ಆಗಿವೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಗಮನಹರಿಸಬೇಕಿದೆ.
-ಮಹದೇವಶೆಟ್ಟಿ, ಇರಸವಾಡಿ ನಿವಾಸಿ
ಇರಸವಾಡಿ ಗ್ರಾಮದ ಕೆರೆ ಬಳಿ ಈ ಬಾರಿ ಸುರಿದ ಹೆಚ್ಚುವರಿ ಮಳೆಯಿಂದ ರಸ್ತೆ ಕುಸಿದು ಹೋಗಿದ್ದು, ಈ ಬಗ್ಗೆ ಮೇಲ ಧಿಕಾರಿಗಳಿಗೆ ಮಳೆಯಿಂದ ಹಾನಿ ಉಂಟಾಗಿರುವ ಬಗ್ಗೆ ಈ ಸ್ಥಳವನ್ನು ಪರಿಶೀಲಿಸಿ ವರದಿ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕೆಲಸ ಆರಂಭಿಸಲಾಗುವುದು.
– ಕೆ.ಎಂ.ಮಧುಸೂದನ್, ಜೆಇ,ಲೋಕೋಪಯೋಗಿ ಇಲಾಖೆ, ಚಾಮರಾಜನಗರ
– ಫೈರೋಜ್‌ಖಾನ್